ಇತ್ತೀಚಿನ ಸುದ್ದಿ
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ 35ನೇ ಪದವಿ ದಿನ: ಡಾ. ಮುತ್ತು ವಲ್ಲಿಯಮ್ಮೈ ನಾಚಿಯಪ್ಪನ್ ಗೆ ಅಧ್ಯಕ್ಷರ ಚಿನ್ನದ ಪದಕ ಪ್ರದಾನ
05/04/2025, 00:14

ಮಂಗಳೂರು(reporterkarnataka.com):ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ 35 ನೇ ಪದವಿ ದಿನದಂದು ಅತ್ಯುತ್ತಮ ಔಟ್ ಗೋಯಿಂಗ್ ಪ್ರಿ ಗ್ರಾಜ್ಯುವೆಟ್ ಬಿ.ಎಚ್.ಎಂ.ಎಸ್. (ಹೋಮಿಯೋಪತಿ) 2019 ಬ್ಯಾಚ್‌ಗೆ ಅಧ್ಯಕ್ಷರ ಚಿನ್ನದ ಪದಕವನ್ನು ಡಾ. ಮುತ್ತು ವಲ್ಲಿಯಮ್ಮೈ ನಾಚಿಯಪ್ಪನ್ ಅವರಿಗೆ ನೀಡಲಾಯಿತು.
ಮಂಗಳೂರಿನ ಬಿಷಪ್ ಅತಿ ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ, ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ಡಾ. (ಫಾದರ್) ಪ್ರವೀಣ್ ಮಾರ್ಟಿಸ್, ಡಾ. ಸುಭಾಸ್ ಸಿಂಗ್, ಪೋಷಕರಾದ ಎಫ್‌ಎಂಸಿಐ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಮತ್ತು ನಿಯೋಜಿತ ನಿರ್ದೇಶಕ ಫಾದರ್ ಫೌಸ್ಟಿನ್ ಲ್ಯೂಕಾಸ್ ಲೋಕೋ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.