6:45 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

Fire Tragedy | ಮಾಣಿ ಸಮೀಪದ ಪೆರಾಜೆ ಮಠದ ಬಳಿ ಗುಡ್ಡಕ್ಕೆ ಬೆಂಕಿ: ಪುನಾರ್ಪುಳಿ ಗಿಡಗಳಿಗೆ ಹಾನಿ

25/03/2025, 11:36

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾ ಪುರ ಮಠದ ವತಿಯಿಂದ ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು ಒಂದು ಸಾವಿರ ಪುನಾರ್ಪುಳಿ ಗಿಡಗಳ ತೋಟಕ್ಕೆ ಸೋಮವಾರ
ಆಕಸ್ಮಿಕವಾಗಿ ಬೆಂಕಿಬಿದ್ದಿದ್ದು, ಹಾನಿಯುಂಟಾಗಿದೆ.


ಸ್ಥಳೀಯರು ನೀರುಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬಿಸಿಲಿನ ಧಗೆಗೆ ಬೆಂಕಿ ಗುಡ್ಡಕ್ಕೆ ಹರಡಿಕೊಂಡಿತು. ಬಳಿಕ ಬಂಟ್ವಾಳ ಫೈರ್ ಸರ್ವಿಸ್ ನವರು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಫಲಭರಿತ ಸುಮಾರು 50 ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ ಸುಟ್ಟು ಹೋಗಿವೆ. ಹತ್ತಿರದಲ್ಲೇ ಮನೆಗಳು ಹಾಗೂ ಏರ್ಟೆಲ್ ನವರ ಟವರ್ ಇದ್ದು ಸುತ್ತಲೂ ಬೆಂಕಿ ಆವರಿಸಿದ್ದು ಹಾನಿಯಾಗಲಿಲ್ಲ. ಮಠದ ಆಡಳಿತ ಕ್ರಿಯಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸ್ಥಳಕ್ಕಾಗಮಿಸಿ ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು