9:56 PM Sunday30 - March 2025
ಬ್ರೇಕಿಂಗ್ ನ್ಯೂಸ್
PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ…

ಇತ್ತೀಚಿನ ಸುದ್ದಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರದಾನ

24/03/2025, 09:38

ಮೈಸೂರು(reporterkarnataka.com): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮ ಮೈಸೂರಿನ ʼಕೊಂಕಣ್ ಭವನʼದಲ್ಲಿ ಭಾನುವಾರ
ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದ್ದಕ್ಕೆ ಮತ್ತು ಪುಸ್ತಕ ಪುರಸ್ಕೃತರು ಕನ್ನಡ ಲಿಪಿಯಲ್ಲಿ ಪುಸ್ತಕ ಬರೆದ್ದಕ್ಕೆ ಸಂತೋಷಪಟ್ಟರು. ಕೊಂಕಣಿ ಭಾಷೆಯ ಸಾಹಿತ್ಯ, ಕಲೆ ಇನ್ನು ಬೆಳೆಯಲಿ. ಕೊಂಕಣಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಕೊಡುವಲ್ಲಿ ಸರ್ಕಾರವನ್ನು ವಿನಂತಿಸಿ, ಸರ್ಕಾರದ ಬಳಿ ಮಾತುಕತೆ ನಡೆಸುತ್ತೇನೆಂದು ಭರವಸೆ ನೀಡುವುದರೊಂದಿಗೆ, ಕೊಂಕಣಿ ಭಾಷೆ ಉಳಿಸಲು ಸಹಕಾರ ಕೊಡುತ್ತೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿ, ನೆರೆದಿರುವ ಎಲ್ಲಾ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಿದ್ದಿ ಸಾಂಸ್ಕೃತಿಕ ಕಲಾತಂಡದಿಂದ ಪ್ರದರ್ಶನವಾಗಬೇಕಿದ್ದ ತಂಡದ ಕಲಾವಿದರೊಬ್ಬರು, ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದರಿಂದ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಹಲವಾರು ಕಥೆ, ಕಾದಂಬರಿ, ಕವನಗಳನ್ನು ಬರೆದು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೆಟ್ರಿಕ್ ಕಾಮಿಲ್ ಮೋರಾಸ್, ವಿವಿಧ ಕೊಂಕಣಿ ಸಂಗೀತ ವಾದ್ಯಗಳಲ್ಲಿ ಪರಿಣತಿ ಪಡೆದು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜೋಯೆಲ್ ಪಿರೇರಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿದ್ದಿ ಸಂಸ್ಕೃತಿಯನ್ನು ಉಳಿಸಿ ಪಸರಿಸಿದ ಸೊಬೀನಾ ಮೋತೇಶ್ ಕಾಂಬ್ರೆಕರ್ ಇವರಿಗೆ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅಕಾಡೆಮಿ ಪರವಾಗಿ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಫೆಲ್ಸಿ ಲೋಬೊ ಇವರಿಗೆ ʼಪಾಲ್ವಾ ಪೋಂತ್ʼ ಕವಿತಾ ಪುಸ್ತಕಕ್ಕೆ ಹಾಗೂ ವಲೇರಿಯನ್ ಸಿಕ್ವೇರಾ ಇವರಿಗೆ ʼಶೆತಾಂ ಭಾಟಾಂ ತೊಟಾಂನಿʼ ಲೇಖನ ಪುಸ್ತಕಕ್ಕೆ ಪುಸ್ತಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪುರಸ್ಕೃತರ ಪರವಾಗಿ ಜೋಯೆಲ್ ಪಿರೇರಾ ಹಾಗೂ ಫೆಲ್ಸಿ ಲೋಬೊರವರು ತಮ್ಮ ಅನಿಸಿಕೆಗಳನ್ನು ಹಂಚಿ, ಅಕಾಡೆಮಿಗೆ ಹಾಗೂ ಅವರ ವೈಯುಕ್ತಿಕ ಸಾಧನೆಗೆ ಪ್ರೋತ್ಸಾಹ ನೀಡಿದವರಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಪರಿಚಯ ಪುಸ್ತಕವನ್ನು ವಿಮೋಚನೆಗೊಳಿಸಿ, ತಮ್ಮ ಮಾತೃಭಾಷೆಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಭಾಷೆಯನ್ನು ಉಳಿಸಿಕೊಂಡು ಬಂದ ಎಲ್ಲಾ ಸಾಹಿತಿ, ಕಲಾವಿದರಿಗೆ ಕೃತಜ್ಞತೆ ಕೋರಿದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವಲೇರಿಯನ್ ಡಿಸೋಜ(ವಲ್ಲಿ ವಗ್ಗ), ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಜೋನ್ ಡಿಸೋಜ ಹಾಗೂ ಕಾರ್ಯದರ್ಶಿಯಾದ ಜೋಯ್ಸ್ ಸಿಕ್ವೇರಾರವರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಸ್ವಾಗತಿಸಿ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಜೋನ್ ಡಿಸೋಜ ವಂದನಾರ್ಪಣೆ ಸಲ್ಲಿಸಿದರು. ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಅಕ್ಷತಾ ನಾಯಕ್ ವೇದಿಕೆಯಲ್ಲಿದ್ದರು.
ಆಂಟನಿ ಕೀರ್ತನ್ ಜೇಮ್ಸ್ ಮತ್ತು ತಂಡದಿಂದ ಬ್ರಾಸ್ ಬ್ಯಾಂಡ್, ಎಲ್ರೋನ್ ರೊಡ್ರಿಗಸ್ ಮತ್ತು ತಂಡದಿಂದ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇವರು ಸಹಯೋಗವನ್ನು ನೀಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು