4:58 PM Wednesday19 - March 2025
ಬ್ರೇಕಿಂಗ್ ನ್ಯೂಸ್
ತೊಗರಿ ಖರೀದಿ ನೊಂದಣಿ ಮಾರ್ಚ್ ತಿಂಗಳಾಂತ್ಯದವರೆಗೆ ವಿಸ್ತರಣೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Farmers Loan | ಅರ್ಹತೆ ಇರುವ ರೈತ ಫಲಾನುಭಗಳಿಗೆ ಸಾಲ ಸೌಲಭ್ಯ: ವಿಧಾನ… ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ… Water Dispute | ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ… ಯುವನಿಧಿ ಯೋಜನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ: ಸಚಿವ ಡಾ. ಶರಣಪ್ರಕಾಶ್… Education | ದೈಹಿಕ ಶಿಕ್ಷಕರ ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು ಪರಿಶೀಲನೆ: ಶಿಕ್ಷಣ… Solar power & Wind power | ಸೌರ ಶಕ್ತಿ ಮತ್ತು ಪವನ… Legislative Council | ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ… KSRTC | ಬಿಜೆಪಿ ಸರಕಾರ ಶೇ 47ರಷ್ಟು ಬಸ್ ದರ ಏರಿಕೆ ಮಾಡಿತ್ತು,… Education Department | ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ವಿರುದ್ಧ ಕ್ರಮಕ್ಕೆ ಮುಂದಾಗಿ:…

ಇತ್ತೀಚಿನ ಸುದ್ದಿ

Drugs Mafia | ಮಂಗಳೂರು ಪೊಲೀಸರಿಂದ ಬೃಹತ್ ಪ್ರಮಾಣದ ಡ್ರಗ್ಸ್ ವಶ: ದ.ಕ. ಮಹಿಳಾ ಕಾಂಗ್ರೆಸ್ ಅಭಿನಂದನೆ

19/03/2025, 11:19

ಮಂಗಳೂರು(reporterkarnataka.com): ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಿಸಿಬಿ ಪೊಲೀಸರು ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುವನ್ನು ವಶಪಡಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರನ್ನು ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಯೋಗ ಭೇಟಿಯಾಗಿ ಸೋಮವಾರ ಅಭಿನಂದಿಸಿತು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಮಂಗಳೂರಿನ ಸಿಸಿಬಿ ಪೊಲೀಸರ ತಂಡ ಬೃಹತ್ ಮಾದಕ ಜಾಲವನ್ನು ಭೇದಿಸಿ ರಾಜ್ಯ ಮತ್ತು ಜಿಲ್ಲೆಯ ಯುವಕರ ಬದುಕಿಗೆ ಮಾರಕವಾಗಿದ್ದ ಬಹುದೊಡ್ಡ ಅಪಾಯವೊಂದನ್ನು ತಪ್ಪಿಸಿದೆ. ಮಾದಕ ದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮತ್ತು ಸ್ವಸ್ಥ ಪರಿಸರ ಕಟ್ಟಿಕೊಡಲು ರಾಜ್ಯ ಕಾಂಗ್ರೆಸ್ ಸಕರಕಾರ ಬದ್ಧವಾಗಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಇಲಾಖೆಯನ್ನು ಗುರುತಿಸಿ ರಾಜ್ಯ ಸರ್ಕಾರದಿಂದ ಸೂಕ್ತ ಬಹುಮಾನ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಿ.ಸಿ.ಆರ್.ಬಿ ಉಪ ಆಯುಕ್ತೆ ಗೀತಾ ಕುಲಕರ್ಣಿ, ಮಂಗಳೂರು ಪೋಲೀಸ್ ದಕ್ಷಿಣ ಉಪವಿಭಾಗ ಆಯುಕ್ತೆ ಧನ್ಯಾ ನಾಯಕ್, ಸಂಚಾರ ಪೋಲೀಸ್ ಮಂಗಳೂರು ನಗರ ಉಪ ವಿಭಾಗದ ಉಪ ಆಯುಕ್ತೆ ನಜ್ಮಾ ಫಾರೂಕಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸ್ವರೂಪ ಎನ್. ಶೆಟ್ಟಿ. ಗೀತಾ ಅತ್ತಾವರ, ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್, ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾ ಚೇತನ್, ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ ದೀಪಕ್, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು