12:48 AM Tuesday18 - March 2025
ಬ್ರೇಕಿಂಗ್ ನ್ಯೂಸ್
Farmers Loan | ಅರ್ಹತೆ ಇರುವ ರೈತ ಫಲಾನುಭಗಳಿಗೆ ಸಾಲ ಸೌಲಭ್ಯ: ವಿಧಾನ… ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ… Water Dispute | ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ… ಯುವನಿಧಿ ಯೋಜನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ: ಸಚಿವ ಡಾ. ಶರಣಪ್ರಕಾಶ್… Education | ದೈಹಿಕ ಶಿಕ್ಷಕರ ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು ಪರಿಶೀಲನೆ: ಶಿಕ್ಷಣ… Solar power & Wind power | ಸೌರ ಶಕ್ತಿ ಮತ್ತು ಪವನ… Legislative Council | ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ… KSRTC | ಬಿಜೆಪಿ ಸರಕಾರ ಶೇ 47ರಷ್ಟು ಬಸ್ ದರ ಏರಿಕೆ ಮಾಡಿತ್ತು,… Education Department | ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ವಿರುದ್ಧ ಕ್ರಮಕ್ಕೆ ಮುಂದಾಗಿ:… ಬಿಜೆಪಿ ತರಹ ಕೇವಲ 10% ಜನರ ಕೈಹಿಡಿದು ಶೇ. 90% ಜನರನ್ನು ಕೈಬಿಟ್ಟಿಲ್ಲ:…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ,112 ಗಸ್ತು ವಾಹನ, ರಾಣಿ ಚೆನ್ನಮ್ಮ ತಂಡ

18/03/2025, 00:13

ಬೆಂಗಳೂರು (reporterkarnataka.com): ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯ ಎಂದು ಗೃಹ ಸಚಿವ ಡಾ‌.ಜಿ.ಪರಮೇಶ್ಚರ್ ಹೇಳಿದರು.
ವಿಧಾನ ಪರಿಷತ್ ಅಧಿವೇಶನದಲ್ಲಿ ಸದನದ ಸದಸ್ಯರಾದ ಶರವಣ, ಸಿ.ಟಿ.ರವಿ, ರವಿಕುಮಾರ್ ಮುಂತಾದವರು ನಿಯಮ 68 ರಡಿ ಮೈಕ್ರೋ ಫೈನಾನ್ಸ್ ಹಾವಳಿ , ಮೈಸೂರಿನ ಉದಯಗಿರಿ ಪ್ರಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ಕೈಗೊಂಡ ಕ್ರಮ ಕುರಿತು ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ಸರ್ಕಾರ ‘ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025 ಅನ್ನು ಜಾರಿಗೆ ತಂದಿದೆ. ನೋಂದಣಿಯಾಗದ, ಸುರಕ್ಷತಾ ಕ್ರಮಗಳನ್ನು ಅನುಸರಿಸದ, ಸಾರ್ವಜನಿಕರೊಂದಿಗೆ ನಿಯಮಬಾಹಿರವಾಗು ನಡೆದುಕೊಳ್ಳುವ ಮೈಕ್ರೋಫ್ ಫೈನಾನ್ಸ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದರು. ಸಾಲ ನೀಡುವ ಸಂಸ್ಥೆಗಳು ಆರ್ ಬಿ ಐ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೆಂದರು
ಇಂತಹ ಕಂಪೆನಿಗಳಿಂದ ಸಾಲಗಾರರಿಗೆ ತೊಂದರೆಯಾದಲ್ಲಿ ನಿರ್ಭೀತಿಯಿಂದ ಸಂಬಂಧಿಸಿದ ಠಾಣೆಗಳಲ್ಲಿ ದೂರು ದಾಖಲಿಸಬಹುದಾಗಿದೆ ಎಂದರು.
ಮೈಸೂರಿನ‌ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆ ದಾಳಿ ಮಾಡಿದ್ದ 15 ಜನರನ್ನು ದಸ್ತಗಿರಿ ಮಾಡಲಾಗಿದ್ದು, ಕ್ರಿಮಿನಲ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಪಿಂಕ್ ಹೊಯ್ಸಳ ಮತ್ತು 112 ಗಸ್ತುವಾಹನ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಹಾಯವಾಣಿ‌ 1091 ಮತ್ತು ವನಿತಾ ಸಹಾಯವಾಣಿ 22943225 ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಮಹಿಳಾ ದೌರ್ಜನ್ಯ ತಡೆಯಲು ರಾಣಿ ಚೆನ್ನಮ್ಮ ತಂಡ ರಚಿಸಿದ್ದು, ಮಹಿಳೆಯರಿಗೆ ಸ್ವಯಂ ರಕ್ಷಣೆ ಹಾಗೂ ಮಾರ್ಷಿಯಲ್ ಆರ್ಟ್ಸ್ ತರಬೇತಿ ನೀಡಲಾಗುತ್ತಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು