3:29 PM Sunday16 - March 2025
ಬ್ರೇಕಿಂಗ್ ನ್ಯೂಸ್
Govt Land Encroachment | ಬೆಂಗಳೂರು ನಗರದ ವಿವಿಧೆಡೆ 59.63 ಕೋಟಿ ಮೌಲ್ಯದ… PWD Minister | ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ:… Home Minister | ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ: ಗೃಹ… Forest Minister | ಬೇಲೂರು ಬಳಿ ಕಾಡಾನೆ ದಾಳಿಗೆ ಮಹಿಳೆ ಸಾವು; 3… ಗುಣಮಟ್ಟದ ಕಾನೂನು ಶಿಕ್ಷಣ ಅಗತ್ಯ: ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಪ್ರತಿಪಾದನೆ ತೀರ್ಥಹಳ್ಳಿ: ಮಸೀದಿ ಬಳಿ ನಿಲ್ಲಿಸಿದ್ದ ವಾಹನ ಅಪಹರಿಸಿದ ಖದೀಮರು; 30 ಲಕ್ಷ ರೂ.… ವಿಧಾನ ಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಅಪಘಾತ: ದೂರವಾಣಿ ಕರೆ ಮಾಡಿ… VV Shutdown | ವಿವಿ ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ; ಬಿಜೆಪಿಗೆ ಆತಂಕ… ಮಾತು ಉಳಿಸಿಕೊಂಡ ಸಿದ್ದರಾಮಯ್ಯ ಸರಕಾರ; ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮೀ… ನಟ ಅನಂತನಾಗ್ ದಂಪತಿಯ ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ; ಮಾಜಿ ಡಿಸಿಎಂ…

ಇತ್ತೀಚಿನ ಸುದ್ದಿ

ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ

16/03/2025, 12:02

ಮಂಗಳೂರು(reporterkarnataka.com):ಗ್ರಾಮೀಣ ಭಾಗದ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಮಾದರಿ ಘಟಕಗಳಾದ ಮೆಟೀರಿಯಲ್ ರಿಕವರಿ ಪೆಸಿಲಿಟಿ, ನಿಟ್ಟೆ (ಕಾರ್ಕಳ ತಾಲೂಕು), ಎಡಪದವು (ಮಂಗಳೂರು ತಾಲೂಕು), ನರಿಕೊಂಬು (ಬಂಟ್ವಾಳ ತಾಲೂಕು), ಮತ್ತು ಕೆದಂಬಾಡಿ (ಪುತ್ತೂರು ತಾಲೂಕು) ಘಟಕಗಳನ್ನು ಮಂಗಳಾ ರಿಸೋರ್ಸ್ ಮ್ಯಾನೆಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ವಹಣೆ ಮಾಡುತ್ತಿದ್ದು ಈ ನಾಲ್ಕು ಘಟಕಗಳ ಮೂಲಕ ಉಭಯ ಜಿಲ್ಲೆಯ 220ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿಗೆ ಸೇವೆಯನ್ನು ನೀಡುತ್ತಿದೆ. ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಾಗಾರ “ಬ್ಲಾಸಮ್ – ಮಹಿಳಾ ಆರೋಗ್ಯ ಮತ್ತು ಸಬಲೀಕರಣ ಮತ್ತು ಸ್ಥಿರತೆಯ ಕಾರ್ಯಾಗಾರ” ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರದಲ್ಲಿ ಗ್ರಾಮೀಣ ಭಾಗದ ತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ, ಪರಿಸರ ಸ್ನೇಹಿಯಾಗಿ ಋತುಚಕ್ರ ನಿರ್ವಹಣೆ ಮತ್ತು ಶುಚಿತ್ವದ ಕುರಿತು ಅರಿವು ಮೂಡಿಸಲಾಗಿದ್ದು, ಪರಿಸರ ಸ್ನೇಹಿ ಮೆನ್ಸುಟ್ರುವಲ್ ಕಪ್ ಬಳಕೆಯ ಬಗ್ಗೆ ತರಬೇತಿಯನ್ನು ನಿಟ್ಟೆ ಯುನಿವರ್ಸಿಟಿಯ ಪ್ರಾಧ್ಯಾಪಕಿ ಡಾ.ಪ್ರಿಯಾ ಡಿ ಆಳ್ವಾ ಮತ್ತು ಶಿಲ್ಪಾ ಶಾಸ್ತ್ರಿಯವರು ನೀಡಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಉಚಿತ menstrual cups ವಿತರಿಸಲಾಗಿದ್ದು. ಮಹಿಳೆಯರ ಆರೋಗ್ಯ ಮತ್ತು ಪರಿಸರ ಸ್ನೇಹಿತ ಜೀವನ ಶೈಲಿಗೆ ಪೂರಕವಾಗಿದೆ. ಕಾರ್ಯಕ್ರಮಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಯತ್ ಸಹಕರ ನೀಡಿದ್ದರು ಮತ್ತು ಕಾರ್ಯಕ್ರಮವನ್ನು rePurpose Global ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಪ್ರಜ್ವಲ್ ಶೆಣೈ ಕಾರ್ಯಕ್ರಮ ಸಂಯೋಜಿಸಿದರು ಮತ್ತು ಧನುಷ್ M.S , ವಿಜೇಶ್ ದೇವಾಡಿಗ, ನಿಧಿಕೃಷ್ಣ ಕಾರ್ಯಕ್ರಮ ಸಂಘಟಿಸಲು ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು