ಇತ್ತೀಚಿನ ಸುದ್ದಿ
ಹುಣಸಗಿ: ಐಬಿ ತಾಂಡದಲ್ಲಿ ಹೋಳಿ ಹಬ್ಬ ಸಂಭ್ರಮದಿಂದ ಆಚರಣೆ
16/03/2025, 11:56

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmai.com
ಹುಣಸಗಿ ತಾಲೂಕಿನ ಐಬಿ ತಾಂಡದಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮಿಸಿದರು. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪರಚಿತು.
ವಯಸ್ಸಿನ ಭೇದ ಮರೆತು ಯುವಕರು ,ವೃದ್ದರು, ಮಕ್ಕಳು ಹೋಳಿಯಲ್ಲಿ ಮಿಂದೆದ್ದರು.
ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಯಿತು.
ಬೆಳಿಗ್ಗೆಯಿಂದಲೇ ಹೋಳಿ ಆಚರಣೆ ಜೋರಾಗಿತ್ತು. ಐಬಿ ತಾಂಡದಲ್ಲಿ ಹೋಳಿ ಹಬ್ಬದ ಆಚರಣೆ ಜೋರಾಗಿ ನಡೆಯಿತು. ಈ ಸಂದರ್ಭದಲ್ಲಿ ರಾಜು ರಾಠೋಡ, ಚಂದು ಹರವತ್ತ, ಸಂತು, ತಾಂಡದ ಗುರು ಹಿರಿಯರು ಇದ್ದರು.