3:35 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಮಸೀದಿ ಬಳಿ ನಿಲ್ಲಿಸಿದ್ದ ವಾಹನ ಅಪಹರಿಸಿದ ಖದೀಮರು; 30 ಲಕ್ಷ ರೂ. ಕಳ್ಳತನ?

14/03/2025, 22:35

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಶಿವಮೊಗ್ಗದಿಂದ ಮಂಗಳೂರಿಗೆ ಗುಜರಿ ಸಾಮಾನುಗಳನ್ನು ತರಲು ಹೋಗುತ್ತಿದ್ದ ವಾಹನವೊಂದನ್ನು ಅಪಹರಿಸಿ ಬೇರೆಡೆ ನಿಲ್ಲಿಸಿ ಹೋಗಿರುವ ಘಟನೆ ನಡೆದರೆ, ಆ ವಾಹನದಲ್ಲಿದ್ದ ಹಣದ ಮೌಲ್ಯವನ್ನು ಕೇಳಿ ಒಮ್ಮೆಲೇ ಎಲ್ಲರೂ ಬೆಚ್ಚಿ ಬೀಳುವ ಘಟನೆ ರಂಜದಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.
ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಜದಕಟ್ಟೆಯ ಮಸೀದಿ ಬಳಿ ಟಾಟಾ ಗುಡ್ಸ್ ವಾಹನವೊಂದನ್ನು ನಿಲ್ಲಿಸಿ ನಮಾಜ್ ಮಾಡಲು ಮಸೀದಿಗೆ ತೆರಳಿದ್ದರು. ಆ ವಾಹನದಲ್ಲಿ ಬರೋಬ್ಬರಿ 30 ಲಕ್ಷ ಹಣ ಇತ್ತು ಎಂದು ಹೇಳಲಾಗಿದ್ದು ಈಗ ಆ ಹಣವನ್ನು ಯಾರೋ ಅಪಹರಣ ಮಾಡಿದ್ದರು. ಮಸೀದಿ ಎದುರು ನಿಲ್ಲಿಸಿದ್ದ ವಾಹನವನ್ನೇ ಅಪಹರಿಸಿರುವ ಕಳ್ಳರು ನಂತರ ಆ ವಾಹನವನ್ನು ಕೂಗ್ ಅಳತೆ ದೂರದ
ಬಿಳುಕೊಪ್ಪ ಬಳಿ ವಾಹನ ನಿಲ್ಲಿಸಿ ಹಣವನ್ನು ಕದ್ದೊಯ್ದಿದ್ದಾರೆ.
ಅಷ್ಟೊಂದು ಹಣ ನಿಜವಾಗಿಯೂ ಇತ್ತಾ? ಅಷ್ಟಕ್ಕೂ ಅಷ್ಟೊಂದು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಿದ್ದು ಯಾಕೆ? ಎಂಬ ಪ್ರೆಶ್ನೆ ಒಂದೆಡೆ ಯಾದರೆ ಹಣ ಇದ್ದ ವಿಚಾರ ತಿಳಿದಂತವರೇ ಯಾರೋ ಈ ಕೆಲಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು