ಇತ್ತೀಚಿನ ಸುದ್ದಿ
ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗೆ ವೈರಸ್, ಕೀಟ ಬಾಧೆ: ಸಂಶೋಧನಾ ಕೇಂದ್ರದಿಂದ ನಿಯಂತ್ರಿಸಲು ಕ್ರಮ
12/03/2025, 23:46

ಬೆಂಗಳೂರು (reporterkarnataka.com):ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗೆ ವೈರಸ್, ಕೀಟ ತಗಲದಂತೆ ಸಂಶೋಧನಾ ಕೇಂದ್ರದಿಂದ ನಿಯಂತ್ರಿಸುವ ಕ್ರಮವನ್ನು ತೋಟಗಾರಿಕೆ ಇಲಾಖೆಯು ಕೈಗೊಂಡಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರಾದ ಶ್ರೀಮತಿ ರೂಪಕಲಾ ಎಂ. ಇವರ ಗಮನ ಸೆಳೆಯುವ ಸೂಚನೆಗೆ ತೋಟಗಾರಿಕೆ ಸಚಿವರ ಪರವಾಗಿ ಉತ್ತರ ನೀಡಿದರು.