ಇತ್ತೀಚಿನ ಸುದ್ದಿ
ಚಳ್ಳಕೆರೆ: ಹೆಚ್ಚುತ್ತಿರುವ ಕಳ್ಳತನ, ಲೂಟಿ ಪ್ರಕರಣ; ಪೊಲೀಸ್ ಇಲಾಖೆ, ತಹಶೀಲ್ದಾರ್ ಗೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಮನವಿ
11/03/2025, 23:11

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳತನ, ಲೂಟಿ, ದರೋಡೆ ಹೆಚ್ಚುತ್ತಿದ್ದು, ಜನರು ಭಯಭೀತಿಗೊಂಡಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಪರವಾಗಿ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ತಿಂಗಳಿಂದ ಚಳ್ಳಕೆರೆ ತಾಲೂಕಿನಲ್ಲಿ ಸರಣಿ ಕಳ್ಳತನ ಹೆಚ್ಚಾಗಿದ್ದು. ಹಳ್ಳಿಯಿಂದ ಚಳ್ಳಕೆರೆಗೆ ಬರುವ ಬ್ಯಾಂಕಿನಲ್ಲಿ ವ್ಯವಹರಿಸುವ ಜನರಲ್ಲಿ ಆತಂಕ ಉಂಟು ಮಾಡಿದೆ. ಕಳೆದ ಎರಡು ತಿಂಗಳಿಂದ ವಾಸವಿ ಮಹಲ್ ಹತ್ತಿರ, ಶಾಂತಿನಗರ,vವಾಸವಿ ಕಾಲೋನಿ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ, ಸಚಿವ ಸುಧಾಕರ್ ರವರ ಮನೆಯ ಹತ್ತಿರ ಹೀಗೆ
ಚೈನ್ ಕಳ್ಳತನ, ಮೊಬೈಲ್ ಕಳೆತನ, ಬೈಕ್ ಕಳ್ಳತನ, ಬ್ಯಾಂಕ್ ಇಂದ ಡ್ರಾ ಮಾಡಿಕೊಂಡು ಬಂದಿರುವ ಹಣ ಲೂಟಿ ಮಾಡುವುದು, ಒಂಟಿ ಮಹಿಳೆ ವಾಸಿಸುವ ಇರುವ ಮನೆಗೆ ನುಗ್ಗಿ ಚಿನ್ನಾಭರಣ ಕಳವು ನಡೆದಿದೆ.
ಇದುವರೆಗೂ ಕಳ್ಳರ ಸುಳಿವು ಸಿಕ್ಕಿಲ್ಲ. ಆದಷ್ಟು ಬೇಗ ಪೊಲೀಸ್ ಇಲಾಖೆಯು ಈ ಐನಾತಿ ಕಳ್ಳರನ್ನು ಹಿಡಿದು ಬಂಧಿಸಬೇಕು. ಚಳ್ಳಕೆರೆಯ ಜನರಲ್ಲಿ ಭಯದ ವಾತಾವರಣವನ್ನು ಮುಕ್ತಗೊಳಿಸಿ ನಿರಳತೆಯನ್ನು ಉಂಟುಮಾಡಲಿ ಎಂದು ಚಳ್ಳಕೆರೆಯ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ರಾಜಣ್ಣ ಅವರಿಗೆ ಕರ್ನಾಟಕ ಯುವರಕ್ಷಣಾ ವೇದಿಕೆ ಪರವಾಗಿ ಮನವಿ ಸಲ್ಲಿಸಿದೆ.
ಚಳ್ಳಕೆರೆ ತಾಲ್ಲೂಕು ಘಟಕದ ಕರ್ನಾಟಕ ಯುವರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮೈಲಾರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಹಾಲೇಶ್ ಯಾದವ್ ಬೆಳಗೆರೆ. ನಗರ ಉಪಾಧ್ಯಕ್ಷರಾದ ಜಯಣ್ಣ. ತಾಲೂಕ ಕಾರ್ಯಧ್ಯಕ್ಷರಾದ ಶಿವಪುತ್ರ. ಕಾರ್ಯದರ್ಶಿಯಾದ ಗೌಡ ಯಾದವ್ ಉಪಸ್ಥಿತರಿದ್ದರು.