ಇತ್ತೀಚಿನ ಸುದ್ದಿ
Accident | ಉಪ್ಪಳ: ಭೀಕರ ರಸ್ತೆ ಅಪಘಾತ; 3 ಮಂದಿ ಸ್ಥಳದಲ್ಲೇ ಸಾವು; ಒಬ್ಬ ಗಂಭೀರ
04/03/2025, 14:37

ಮಂಗಳೂರು(reporterkarnataka.com):ಕಾಸರಗೋಡು ಸಮೀಪದ ಉಪ್ಪಳದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಉಪ್ಪಳ ಬ್ರಿಡ್ಜ್ ಬಳಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿ
ಜನಾರ್ದನ, ವರುಣ್, ಕೃಷ್ಣ ಸಾವನ್ನಪ್ಪಿದವರು.
ಡಿವೈಡರ್ ಗೆ ಕಾರು ಡಿಕ್ಕಿಯಾದ ರಭಸಕ್ಕೆ ತುಂಡು ತುಂಡಾಗಿ ರಸ್ತೆಗೆಸೆಯಲ್ಪಟ್ಟಿದೆ.
ರಾಷ್ಟ್ರೀಯ ಹೆದ್ದಾರಿ ಕಾಸರಗೋಡು ತಲಪಾಡಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿಗಾಗಿ ತಾತ್ಕಾಲಿಕ ಅಲ್ಲಲ್ಲಿ ತಡೆಗೋಡೆ ಹಾಗೂ ಡಿವೈಡರ್ ನಿರ್ಮಾಣ ಮಾಡಿದ್ದಾರೆ.
ಡಿವೈಡರ್ ಗೊತ್ತಾಗದೆ
ಕಾರು ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಮಂಜೇಶ್ವರ ಪೊಲೀಸರ ಭೇಟಿ,ಪರಿಶೀಲನೆ ನಡೆಸಿದ್ದಾರೆ.