ಇತ್ತೀಚಿನ ಸುದ್ದಿ
ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ
20/02/2025, 21:39

ಶಿವು ರಾಠೋಡ ಹುಣಸಗಿ ರಾಯಚೂರು
info.reporterkarnataka@gmail.com
ಲಿಂಗಸಗೂರು ಪಟ್ಟನದಲ್ಲಿರುವ ಇಂದಿರಾ ಕ್ಯಾಂಟೀನಲ್ಲಿ ನಿತ್ಯವು ಗುಣಮಟ್ಟದ ಆಹಾರ ನೀಡುತ್ತಿಲ್ಲ. ಕೂಡಲೇ ಗುತ್ತಿಗೆದಾರನ ಗುತ್ತಿಗೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಕಟ ರಕ್ಷಣಾ ವೇದಿಕೆಯ ಅಮರೇಶ ಅವರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನನಲ್ಲಿ ಗುಣಮಟ್ಟದ ಆಹಾರ ಹಂಚಿಕೆ ಮಾಡುವುದಿಲ್ಲ.
ಸರಿಯಾಗಿ ಬೆಂದಿರದ ಚಪಾತಿ ಹಾಗೂ ಅನ್ನ ಆಹಾರವನ್ನು ನೀಡಲಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಡವರು ಸೇರಿದಂತೆ ಹಲವಾರು ಜನ ಇಂತಹುದ್ದೇ ಆಹಾರ ಸೇವಿಸಬೇಕಾಗಿದೆ.
ಸರಕಾರದಿಂದ ಬರುವ ಹಣದಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲಾಗುತ್ತಿದ್ದು ರಿಯಾಯಿತಿ ದರದಲ್ಲಿ ಆಹಾರ ದೊರೆಯುತ್ತಿದೆ ಎಂದು ಬೇರೆಬೇರೆ ಕಡೆಯಿಂದ ಬರುವ ಬಡ ವಿದ್ಯಾರ್ಥಿಗಳು, ಇತರರು ಈ ಕ್ಯಾಂಟಿನ್ ಗೆ ಬರುತ್ತಾರೆ. ಆದರೆ ಇಲ್ಲಿಯ ಅಡುಗೆಯ ಸಿಬ್ಬಂದಿ ತಮ್ಮ ಮನಸೋ ಇಚ್ಚೆಯಂತೆ ಚಪಾತಿ ಮಾಡಿ ಅರೆಬರೆ ಬೆಂದಿರುವ ಊಟ ನೀಡುತ್ತಾರೆ. ಇಂತಹ ಊಟ ಸೇವಿಸಿದ ಹಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅನ್ನವನ್ನು ಮುದ್ದೆಯಾಗಿ ಮಾಡಿದ್ದು ಅದರಲ್ಲಿ ಕೆಲವು ಬೆಂದಿವೆ ಕೆಲಹಾಗೆ ಇವೆ. ಅಂತಹ ಆಹಾರವನ್ನು ನೋಡಿದ ಹಲವಾರು ವಿದ್ಯಾರ್ಥಿಗಳು ಇಂತಹದ್ದು ಹೇಗೆ ತಿನ್ನಬೇಕು ಎಂದು ಪ್ರಶ್ನಿಸಿದ್ದಾರೆ.
ತಿಂದರೆ ತಿನ್ನಿ ಇಲ್ಲವಾದರೆ ಹೊಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಸಾರ್ವಜನಿಕರೊಡನೆ ವಾಗ್ವಾದಕ್ಕಿಳಿಯುವ ಬೆದರಿಕೆ ಹಾಕುವ ಇಲ್ಲಿಯ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಹಾಗೂ ಗುತ್ತಿಗೆದಾರರ ಗುತ್ತಿಗೆ ರದ್ದು ಪಡಿಸಿ ಬೇರೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಅಮರೇಶ ಉಸ್ಕಿಹಾಳ, ದೇವರಾಜ, ರವಿಚಂದ್ರ, ರಮೇಶ, ಶಿವರಾಜ ಸೇರಿದಂತೆ ಇದ್ದರು