8:54 AM Wednesday8 - July 2026
ಬ್ರೇಕಿಂಗ್ ನ್ಯೂಸ್
ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

ಇತ್ತೀಚಿನ ಸುದ್ದಿ

Adichunchanagiri | ವಿಜ್ಞಾನ ಯಾವಾಗಲೂ ಧರ್ಮದ ಜತೆಗಿರಬೇಕು, ಅವಿವೇಕಿಗಳ ಕೈಗೆ ಸಿಗಬಾರದು: ಪ್ರತಿಪಕ್ಷ ನಾಯಕ ಆರ್‌.ಅಶೋಕ್

20/02/2025, 21:17

ಮಂಡ್ಯ(reporterkarnataka.com): ವಿಜ್ಞಾನ-ತಂತ್ರಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕು. ವಿಜ್ಞಾನ ವಿವೇಕಿಗಳ ಕೈಯಲ್ಲಿ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.


ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವದಲ್ಲಿ ಆರ್‌.ಅಶೋಕ್ ಅವರು ಪಾಲ್ಗೊಂಡರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನಕ್ಕೂ ಮಠಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರುತ್ತದೆ. ಈ ಕಾರ್ಯಕ್ರಮದಲ್ಲಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗಿದೆ. ಧರ್ಮ ಪಾಲಿಸುವವರ ಕೈಯಲ್ಲಿ ಧರ್ಮ ಇದ್ದರೆ ಮಾತ್ರ ಎಲ್ಲರಿಗೂ ಒಳಿತಾಗುತ್ತದೆ. ಅಧರ್ಮೀಯರ ಕೈಯಲ್ಲಿ ವಿಜ್ಞಾನ ಸಿಕ್ಕಿದರೆ ಅದರಿಂದ ದೊಡ್ಡ ಅನಾಹುತವಾಗುತ್ತದೆ. ಇಂದು ರೈಲು, ವಿಮಾನದ ಮೂಲಕ ವೇಗವಾಗಿ ದೂರದ ಸ್ಥಳಗಳನ್ನು ತಲುಪಬಹುದು. ಧರ್ಮ ಪಾಲನೆ ಮಾಡುವವರು ಇಂತಹ ವಿಜ್ಞಾನ-ತಂತ್ರಜ್ಞಾನದ ಸಾಧನ ಬಳಸಿದರೆ ಏನೂ ಆಗಲ್ಲ. ಅದರೆ ಅಧರ್ಮೀಯರು ಬಳಸಿದರೆ ಅಪಾಯವಾಗುತ್ತದೆ. ವಿಮಾನವನ್ನು ಬಳಸಿಯೇ ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡವನ್ನು ಧ್ವಂಸ ಮಾಡಲಾಯಿತು ಎಂದರು.
ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಬ್ದುಲ್‌ ಕಲಾಂ ಅವರು ಇಡೀ ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಬೆಳೆಸಿದರು. ಪೊಲೀಸರ ಬಳಿ ಎಷ್ಟೇ ತಂತ್ರಜ್ಞಾನವಿದ್ದರೂ ಕಾಡುಗಳ್ಳ ವೀರಪ್ಪನ್‌ನನ್ನು ಹಲವಾರು ವರ್ಷಗಳ ಕಾಲ ಹಿಡಿಯಲು ಸಾಧ್ಯವಾಗಲಿಲ್ಲ. ವಿವೇಕಿಗಳ ಬಳಿ ವಿಜ್ಞಾನವಿದ್ದರೆ, ಅದು ಸದುಪಯೋಗವಾಗುತ್ತದೆ. ಅವಿವೇಕಿಗಳ ಬಳಿ ಇದ್ದರೆ ಹಾಳಾಗುತ್ತದೆ. ವಿಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕೆಂಬ ಕಾರಣಕ್ಕೆ ಮಠದಲ್ಲಿ ವಿಜ್ಞಾನ ಮೇಳ ಮಾಡಲಾಗುತ್ತಿದೆ ಎಂದರು.
ಮಹಾಕುಂಭ ಮೇಳದಲ್ಲಿ ಸುಮಾರು 40 ಕೋಟಿ ಜನರು ಸೇರಿದ್ದಾರೆ. ಆ ಕಾರ್ಯಕ್ರಮದ ಆಯೋಜಕರಲ್ಲಿ ಜುನಾ ಅಖಾಡದ ಶ್ರೀ ಅವಧೇಶನಾಂದ ಗಿರಿ ಮಹಾರಾಜ್‌ ಕೂಡ ಒಬ್ಬರು. ಇಂತಹ ಮಹಾ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅವರಿಗೆ ನಾನು ವಂದಿಸಿದ್ದೇನೆ. ಅವರನ್ನು ನೋಡಿಯೇ ನನಗೆ ಪುಣ್ಯ ಬಂದಿದೆ ಎಂದರು.
ಮಹಾಕುಂಭಮೇಳಕ್ಕೆ ಹೋದರೆ ಪುಣ್ಯ ಬರುತ್ತದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಮೂರು ದಿನದ ಸಂತೆಯಲ್ಲಿ ನಾವು ಪಾಪವನ್ನು ಕಳೆದು ಪುಣ್ಯ ಸಂಪಾದಿಸಬೇಕು. ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಸದಾ ದೇವರು ಇರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ನಾವು ಕೆಲಸ ಮಾಡಬೇಕು ಎಂದರು.
ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವರ್ಷದ ಪಟ್ಟಾಭಿಷೇಕವನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಮಠವನ್ನು ಮುನ್ನಡೆಸುತ್ತಿದ್ದರು. ಆಗ ನಾನು ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೆ. ಅವರ ಬಳಿಕ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಠವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು