1:21 AM Thursday8 - May 2025
ಬ್ರೇಕಿಂಗ್ ನ್ಯೂಸ್
Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ… ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಸಿ.ರೆಡ್ಡಿ ಅವರ ಜನ್ಮದಿನ: ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ…

ಇತ್ತೀಚಿನ ಸುದ್ದಿ

ಬಣಕಲ್ ಬಾಲಿಕ ಮರಿಯ ಚರ್ಚ್ ವಾರ್ಷಿಕೋತ್ಸವ; ಮಾತೆ ಮರಿಯಮ್ಮ ಭರವಸೆಯ ತಾಯಿ’: ಫಾ.ಪೌಲ್ ಮೆಲ್ವಿನ್ ಡಿಸೋಜ

14/02/2025, 21:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಾತೆ ಮರಿಯಮ್ಮನವರು ಏಸುಕ್ರಿಸ್ತರ ಜನ್ಮದಾತೆಯಾಗಿ ಭರವಸೆಯ ತಾಯಿಯಾಗಿದ್ದಾರೆ ಎಂದು ಮೈಸೂರು ಬೋಗಾಧಿ ಚರ್ಚಿನ ನಿರ್ದೇಶಕರಾದ ಫಾ.ಪೌಲ್ ಮೆಲ್ವಿನ್ ಡಿಸೋಜ ಹೇಳಿದರು.
ಬುಧವಾರ ಸಂಜೆ ಬಣಕಲ್ ಬಾಲಿಕ ಮರಿಯ ಚರ್ಚಿನ ವಾರ್ಷಿಕೋತ್ಸವದಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು.


ಮಾತೆ ಮರಿಯಮ್ಮನವರು ನಿಷ್ಕಳಂಕ ಮಾತೆಯಾಗಿ ಪ್ರಭು ಏಸುವಿಗೆ ಜನ್ಮ ನೀಡಿ ಕ್ರೈಸ್ತರಿಗೆ ಉನ್ನತ ತಾಯಿಯಾಗಿ ನಮಗೆ ಆದರ್ಶ ಮಾತೆಯಾಗಿದ್ದಾರೆ. ಧೀನತೆಯ ಪ್ರತಿರೂಪವಾಗಿ ಮಾತೆ ಮರಿಯಮ್ಮನವರು ದೇವರ ಚರಣದಾಸಿಯಾಗಿ ವಿಧೇಯರಾದರು. ಅವರ ಆದರ್ಶ ಗುಣಗಳು, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು. ನಮ್ಮ ಕುಟುಂಬದಲ್ಲಿ ಭರವಸೆ, ಪ್ರೀತಿ, ವಿಶ್ವಾಸಗಳು ಹೆಚ್ಚಿಸಿ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಏಸು ಕ್ರಿಸ್ತರ ದಾರಿಯಲ್ಲಿ ನಾವು ನಡೆದು ಪರಿವರ್ತನೆಯ ಜೀವನ ನಾವು ನಡೆಸಬೇಕು’ ಎಂದರು. ಬಣಕಲ್ ಚರ್ಚ್ ಧರ್ಮಗುರು ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ಅಮ್ಮನ ಮಮತೆಯ ಸಮಾನವಾದ ಆಭರಣವೂ ಯಾವುದೂ ಇಲ್ಲ. ಸರ್ವರಿಗೂ ಮಾತೆ ಮರಿಯಮ್ಮನವರ ಹೇರಳವಾದ ಕೃಪೆ ಕುಟುಂಬದಲ್ಲಿ ನೆಲೆಸಲಿ. ಚರ್ಚ್ ವಾರ್ಷಿಕೋತ್ಸವಕ್ಕೆ ನೆರವಾದ ಸರ್ವ ದಾನಿಗಳನ್ನು ಅವರ ಸಹಕಾರವನ್ನು ಸ್ಮರಿಸಿದರು.ಹಬ್ಬದ ಶುಭಾಶಯ ಕೋರಿದರು. ಪೂಜೆಯ ಬಳಿಕ ಬಣಕಲ್ ಪಟ್ಟಣದಲ್ಲಿ ಮಾತೆ ಮರಿಯಮ್ಮನವರ ಸುಂದರ ತೇರುವಿನೊಂದಿಗೆ ಪರಮ ಪ್ರಸಾದದ ಪ್ರತಿಷ್ಠಾಪನೆ ಜತೆಗೆ ಕ್ರೈಸ್ತ ಭಕ್ತಾಧಿಗಳು ಆಕರ್ಷಕ ಮೆರವಣಿಗೆ ನಡೆಸಿದರು. ಹಬ್ಬದ ಸಂಭ್ರಮದಲ್ಲಿ ಫಾ.ಆನಂದ್ ಕ್ಯಾಸ್ತಲಿನೊ, ಫಾ.ಥಾಮಸ್ ಕಲಘಟಗಿ, ಫಾ.ಡೇವಿಡ್ ಪ್ರಕಾಶ್, ಫಾ.ಎಡ್ವಿನ್ ರಾಕೇಶ್, ಫಾ.ಜೆ.ಬಿ.ಗೊನ್ಸಾಲ್ವಿಸ್, ಫಾ.ಡೆನಿಸ್ ಡಿಸೋಜ ಸೇರಿದಂತೆ ಚಿಕ್ಕಮಗಳೂರು ಧರ್ಮಕ್ಷೇತ್ರದ ವಿವಿಧ ಚರ್ಚಿನ ಇಪ್ಪತ್ತಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದರು. ಸಿಸ್ಟರ್ ಹಿಲ್ಡಾ ಲೋಬೋ, ಸಿಸ್ಟರ್ ಆಮಲ್ ರಾಣಿ ಸೇರಿದಂತೆ ವಿವಿಧ ಕ್ರೈಸ್ತ ಭಗಿನೀಯರು ಇದ್ದರು.ಬಣಕಲ್ ಕ್ರೈಸ್ತ ಅಭಿವೃದ್ದಿ ಸಂಘ, ಹರ್ಷ ಮೆಲ್ವಿನ್ ಲಸ್ರಾದೊ, ಐಸಿವೈಎಂ ಯುವ ಸಂಘಟನೆ, ಪೀಠ ಸೇವಕರು, ಸ್ತ್ರೀ ಸಂಘಟನೆಯವರು, ಸಂಗೀತ ವೃಂದದವರು ವಾರ್ಷಿಕೋತ್ಸವದ ಸಾಥ್ ವಹಿಸಿದ್ದರು. ಮಂಗಳೂರಿನ ಪಜೀರ್ ಬ್ಯಾಂಡ್ ಸಿಸ್ಟಮ್ ಮೆರವಣಿಗೆಯ ಅಂದ ಹೆಚ್ಚಿಸಿತು. ಬಳಿಕ ಸಹ ಭೋಜನ ಕೂಟ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು