7:21 AM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

Chitradurga | ಚಳ್ಳಕೆರೆ: ನಿಧಿಯಾಸೆಗೆ ನರಬಲಿ; ಡ್ರಾಪ್ ಕೊಡುವ ನೆಪದಲ್ಲಿ ಕೊಲೆ; ಜ್ಯೋತಿಷಿ ಸಹಿತ ಇಬ್ಬರ ಬಂಧನ

12/02/2025, 18:37

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ವ್ಯಕ್ತಿಯೋರ್ವನನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ನಿಧಿಯಾಸೆಗಾಗಿ ನರಬಲಿ ಕೊಟ್ಟಿರುವ ಘಟನೆ ಚಿತ್ರದುರ್ಗ ಚಳ್ಳಕೆರೆ ತಾಲ್ಲೂಕಿ ಪರಾಶುರಂಪುರದ ಜೆ ಜೇ ಕಾಲೋನಿಯಲ್ಲಿ ನಡೆದಿದೆ.
ಪಾವಗಡ ಮೂಲದ ಜ್ಯೋತಿಷಿಯೊಬ್ಬರ ಮಾತು ನಂಬಿದ ಆಂಧ್ರ ಮೂಲದ ಆನಂದ ರೆಡ್ಡಿ ಎಂಬಾತ ನಿಧಿಯಾಸೆಗಾಗಿ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲಿಯುತ್ತಿದ್ದ ಜೆಜೆ ಕಾಲೊನಿ ನಿವಾಸಿ ಪ್ರಭಾಕರ ಎಂಬಾತನನ್ನು ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನರಬಲಿ ಕೊಟ್ಟಿದ್ದಾನೆ. ಡಾಬಾವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆನಂದ್ ರೆಡ್ಡಿ, ಪಾವಗಡದ ಕೋಟಗುಡ್ಡ ನಿವಾಸಿ ಜ್ಯೋತಿಷಿ ರಾಮಕೃಷ್ಣನ ಬಳಿ ಜ್ಯೋತಿಷ ಕೇಳಿದ್ದ. ನಿಧಿಸಿಗಬೇಕೆಂದರೆ ನರಬಲಿಕೊಡಬೇಕು ಎಂದಿದ್ದಾನೆ.
/
ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ. ಆ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸು ಎಂದಿದ್ದನಂತೆ. ಜ್ಯೋತಿಷಿ ಮಾತು ಕೇಳಿದ ಆನಂದ ರೆಡ್ಡಿ, ಭಾನುವಾರ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಬಂದ ಪ್ರಭಾಕರನ ಬರ್ಬರ ಹತ್ಯೆ ಮಾಡಿದ್ದಾನೆ.
ಪ್ರಭಾಕರ ಪರಾಶುರಂಪುರದ ಬಸ್ ನಿಲ್ದಾಣದ ಬಳಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದ. ಅದೇ ಮಾರ್ಗವಾಗಿ ನಡೆದು ಬರುತ್ತಿದ್ದ ಆತನನ್ನು ಕಂಡ ಆನಂದ ರೆಡ್ಡಿ ಬೈಕ್ ನಿಲ್ಲಿಸಿ ಡ್ರಾಪ್ ಕೊಡುತ್ತೇನೆ ಬನ್ನಿ ಎಂದು ಕರೆದೊಯ್ದಿದ್ದಾನೆ. ಬಳಿಕ ಮಾರಕಾಸ್ತ್ರಗಳಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜ್ಯೋತಿಷಿ ರಾಮಕೃಷ್ಣ ಹಾಗೂ ಆರೋಪಿ ಆನಂದ ರೆಡ್ಡಿ ಇಬ್ಬರನ್ನೂ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು