ಇತ್ತೀಚಿನ ಸುದ್ದಿ
Accident | ಅಜ್ಜಂಪುರ: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದಾರುಣ ಸಾವು
12/02/2025, 14:06
![](https://reporterkarnataka.com/wp-content/uploads/2025/02/IMG-20250212-WA0017.jpg)
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟವರನ್ನು ಪ್ರತಾಪ್ (28) ಹಾಗೂ ಗೋವಿಂದ (30) ಎಂದು ಗುರುತಿಸಲಾಗಿದೆ. ಮೃತರು ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಮೂಲದವರು ಎಂದು ತಿಳಿದು ಬಂದಿದೆ.
ಅಜ್ಜಂಪುರದ ಐತಿಹಾಸಿಕ ಅಂತರಘಟ್ಟೆ ಜಾತ್ರೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. 11 ದಿನದ ಅಂತರಘಟ್ಟೆ ಜಾತ್ರೆಯಲ್ಲಿ ಇಂದು ಕಡೇ ದಿನದ ಜಾತ್ರೆ ನಡೆಯುತ್ತಿದೆ.
ಓವರ್ ಸ್ಪೀಡ್ ನಲ್ಲಿ ಹೋಗಿ ಬೈಕ್ ಮರಕ್ಕೆ ಡಿಕ್ಕಿಯೊಡೆದು ಸಾವು ಸಂಭವಿಸಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.