6:20 PM Thursday13 - February 2025
ಬ್ರೇಕಿಂಗ್ ನ್ಯೂಸ್
ಮಂಗಳೂರು: ನೇಶನಲ್ ಈಜು ಚಾಂಪಿಯನ್ 35 ವರ್ಷಗಳಿಂದಲೂ ಸ್ವಿ‌ಮ್ಮಿಂಗ್ ಪೂಲ್ ಲೈಫ್ ಗಾರ್ಡ್! ಮೈಸೂರಿನಲ್ಲಿ ಗಲಭೆಕೋರರಿಗೆ ಇಡೀ ಸರಕಾರ ಬೆಂಬಲ ನೀಡಿದೆ: ಪ್ರತಿಪಕ್ಷದ ನಾಯಕ ಆರ್. ಆಶೋಕ್ ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಜಾಗತಿಕ ಹೂಡಿಕೆದಾರರ ಚರ್ಚಾಗೋಷ್ಠಿಯಲ್ಲಿ ಸಚಿವ ಶರಣ್… Chitradurga | ಚಳ್ಳಕೆರೆ: ನಿಧಿಯಾಸೆಗೆ ನರಬಲಿ; ಡ್ರಾಪ್ ಕೊಡುವ ನೆಪದಲ್ಲಿ ಕೊಲೆ; ಜ್ಯೋತಿಷಿ… ಕಾಂಗ್ರೆಸ್‌ ಸರಕಾರ ಪ್ರಕರಣ ವಾಪಸ್‌ ಪಡೆಯುವುದರಿಂದ ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಬಂದಿದೆ:… ಬೀರೂರು: ರಥ ಟರ್ನ್ ಆಗಲು ಜಾಗದ ವಿವಾದ ತಣ್ಣಗಾಗುತ್ತಿದ್ದಂತೆ ಹೊತ್ತಿ ಉರಿದ ಟ್ರ್ಯಾಕ್ಟರ್,… ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ ಇರಲಿ: ಹೆಣ್ಮಕ್ಕಳಿಗೆ ಎಸಿಪಿ… ಪರಶುರಾಂಪುರ ತಾಲೂಕು ಮಾಡುವುದು ನನ್ನ ಸಂಕಲ್ಪ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಂಜನಗೂಡು: ಶ್ರೀ ಮುರಗಿ ಸ್ವಾಮಿ ಮಠದ ನೂತನ ಗದ್ದುಗೆ, ರಾಜದ್ವಾರ ಲೋಕಾರ್ಪಣೆ ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನಮಾನ: ಸಿಎಂಗೆ ಸಂಸದ ಕ್ಯಾ. ಬ್ರಿಜೇಶ್…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಕೋಣಂದೂರು ಸುತ್ತಮುತ್ತ ಕಳ್ಳತನ; ಒಂಟಿ ಮನೆ, ದೇವಸ್ಥಾನಗಳೇ ಟಾರ್ಗೆಟ್‌!

11/02/2025, 13:40

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.
ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ ₹5,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಪರಾರಿಯಾಗಿದ್ದಾರೆ.
ಆಲೂರು ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನ, ಯೋಗಿಮಳಲಿ ದೇವಸ್ಥಾನದ ಹುಂಡಿ, ಜಂಬೆ, ಹುಲ್ಲತ್ತಿ, ಹುಂಚಾ, ಕಾರ್ಕೊಡ್ಲು ಈ ಭಾಗಗಳಲ್ಲಿ ಕಳ್ಳತನ ನಡೆದಿದ್ದು, ಆಭರಣ, ನಗದು, ಚಪ್ಪರದಲ್ಲಿ ಒಣಗಿಸಿದ್ದ ಅಡಿಕೆ, ಪಾತ್ರೆಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
‘ದಿನದಿಂದ ದಿನಕ್ಕೆ ಒಂದಲ್ಲ ಒಂದು ಭಾಗದಲ್ಲಿ ಕಳ್ಳತನ ನಡೆಯುತ್ತಿರುವುದು ಈ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೆಲವರು ದೂರು ನೀಡಲು ಮುಂದಾಗುತ್ತಿಲ್ಲ. ಒಂಟಿ ಮನೆಗಳಲ್ಲಿ ಕಳ್ಳತನ ನಡೆಯುತ್ತಿದ್ದು, ಸ್ಥಳೀಯರ ಸಹಕಾರ ಇರಬಹುದು’ ಎಂದು ನಿವಾಸಿಗಳು ಶಂಕಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನದ 2 ಕಾಣಿಕೆ ಹುಂಡಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಹಣವನ್ನು ದೋಚಿಕೊಂಡು 2 ಕಿ.ಮೀ. ಅಂತರದಲ್ಲಿ ಹುಂಡಿಯನ್ನು ಬಿಸಾಡಿ ಹೋಗಿದ್ದರು. ಮಾಳೂರು ಠಾಣಾ ವ್ಯಾಪ್ತಿಯ ಯೋಗಿ ಮಳಲಿ ಈಶ್ವರ ದೇವಸ್ಥಾನದ ಸಿ.ಸಿ. ಟಿವಿ ಕ್ಯಾಮೆರಾವನ್ನು ಮುರಿದು ಕಳ್ಳತನ ಮಾಡಿದ್ದರು.
ಯೋಗಿಮಳಲಿಯಲ್ಲಿ ಒಂಟಿ ಮನೆಯೊಂದರ ಬಾಗಿಲು ಮುರಿದು ಪಾತ್ರೆ ಮತ್ತಿತರ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಕಾನುಕೊಪ್ಪದ ಮನೆಯೊಂದರಲ್ಲಿ ಆಸ್ಪತ್ರೆಗೆ ಹೋಗಲು ತಂದು ಮನೆಯಲ್ಲಿಟ್ಟುಕೊಂಡಿದ್ದ ₹10,000 ಹಣವನ್ನು ಕಳ್ಳರು ದೋಚಿದ್ದಾರೆ. ಮಳಲೀಮಕ್ಕಿ ಸಮೀಪದ ಕಳಸಗುಂಡಿ ಮನೆಯೊಂದರಲ್ಲಿ ಬೆಲೆಬಾಳುವ ಬಂಗಾರ, ನಗದು ದೋಚಿದ್ದಾರೆ. ಜಂಬೆ ಗ್ರಾಮದ ಮನೆಯೊಂದರ ಬೀಗವನ್ನು ಹಗಲಿನಲ್ಲೇ ಕಲ್ಲಿನಿಂದ ಒಡೆದು ಪರಾರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು