11:52 PM Thursday13 - February 2025
ಬ್ರೇಕಿಂಗ್ ನ್ಯೂಸ್
ಜಗತ್ತು AI ಹಿಂದೆ ಓಡುವಾಗ ನಾವು FI ಹಿಂದೆ ಓಡ್ತಾ ಇದೀವಿ: ಮುಖ್ಯಮಂತ್ರಿಗಳ… A Walk up the Hill | ಪ್ರೊ. ಮಾಧವ ಗಾಡ್ಗೀಳ್ ಅವರ… PSI Suspension | ಚಿಕ್ಕಮಗಳೂರು: ಕರ್ತವ್ಯಲೋಪ; ಶೃಂಗೇರಿ ಪಿಎಸ್ ಐ ಜಕ್ಕಣ್ಣನವರ್ ಅಮಾನತು ಮಂಗಳೂರು: ನೇಶನಲ್ ಈಜು ಚಾಂಪಿಯನ್ 35 ವರ್ಷಗಳಿಂದಲೂ ಸ್ವಿ‌ಮ್ಮಿಂಗ್ ಪೂಲ್ ಲೈಫ್ ಗಾರ್ಡ್! ಮೈಸೂರಿನಲ್ಲಿ ಗಲಭೆಕೋರರಿಗೆ ಇಡೀ ಸರಕಾರ ಬೆಂಬಲ ನೀಡಿದೆ: ಪ್ರತಿಪಕ್ಷದ ನಾಯಕ ಆರ್. ಆಶೋಕ್ ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಜಾಗತಿಕ ಹೂಡಿಕೆದಾರರ ಚರ್ಚಾಗೋಷ್ಠಿಯಲ್ಲಿ ಸಚಿವ ಶರಣ್… Chitradurga | ಚಳ್ಳಕೆರೆ: ನಿಧಿಯಾಸೆಗೆ ನರಬಲಿ; ಡ್ರಾಪ್ ಕೊಡುವ ನೆಪದಲ್ಲಿ ಕೊಲೆ; ಜ್ಯೋತಿಷಿ… ಕಾಂಗ್ರೆಸ್‌ ಸರಕಾರ ಪ್ರಕರಣ ವಾಪಸ್‌ ಪಡೆಯುವುದರಿಂದ ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಬಂದಿದೆ:… ಬೀರೂರು: ರಥ ಟರ್ನ್ ಆಗಲು ಜಾಗದ ವಿವಾದ ತಣ್ಣಗಾಗುತ್ತಿದ್ದಂತೆ ಹೊತ್ತಿ ಉರಿದ ಟ್ರ್ಯಾಕ್ಟರ್,… ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ ಇರಲಿ: ಹೆಣ್ಮಕ್ಕಳಿಗೆ ಎಸಿಪಿ…

ಇತ್ತೀಚಿನ ಸುದ್ದಿ

ನಂಜನಗೂಡು: ಶ್ರೀಮುರಗಿ ಸ್ವಾಮಿ ಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ; 8ರಂದು ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಭೇಟಿ

06/02/2025, 09:31

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮೈಸೂರು ಜಿಲ್ಲೆ ನಂಜನಗೂಡು ತಾಲೂ

ಕು ಶಿರಮಳ್ಳಿ ಗ್ರಾಮದ ಶ್ರೀಮುರಗಿ ಸ್ವಾಮಿ ಮಠದಲ್ಲಿ ಫೆಬ್ರವರಿ 5 ರಿಂದ ಆರಂಭಗೊಂಡಿದ್ದು, 8ರವರೆಗೆ ನಾಲ್ಕು ದಿನಗಳ ಕಾಲ ಶ್ರೀ ಮಠದ ಮೂರನೇ ಪೂಜ್ಯ ಸ್ವಾಮಿಗಳಾದ ಶ್ರೀ ಬಸವರಾಜ ಸ್ವಾಮಿಗಳ ಗದ್ದುಗೆ ಉದ್ಘಾಟನೆ ಮತ್ತು ಶ್ರೀಮಠದ ಪ್ರವೇಶ ರಾಜದ್ವಾರ ಲೋಕಾರ್ಪಣೆ ಹಾಗೂ ಪೂಜ್ಯರ 11ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಗಿಸ್ವಾಮಿಗಳು ತಿಳಿಸಿದರು .
ಶ್ರೀಮಠದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸುಮಾರು 450ಕ್ಕೂ ಹೆಚ್ಚು ವರ್ಷದ ಇತಿಹಾಸವಿರುವ ಮುರುಗಿ ಮಠದಲ್ಲಿ ಶ್ರೀ ಮುರುಗಿ ಸ್ವಾಮಿಗಳು ತಮ್ಮ ತಪಶಕ್ತಿ, ಆಧ್ಯಾತ್ಮಿಕ ಚಿಂತನೆ ಮತ್ತು ಶರಣ ತತ್ವಗಳ ಪಾಲನೆಯಿಂದ ಪವಾಡ ಪುರುಷರಾಗಿ ಈ ಭಾಗದ ಭಕ್ತರ ಆರಾಧ್ಯ ದೈವ ವಾಗಿದ್ದರು.
ಇಂದಿಗೂ ಅವರ ಹೆಸರಿನಲ್ಲೇ ಈ ಮಠವು ಕರೆಯಲ್ಪಡುತ್ತಿರುವುದು ಅವರ ದೈವತ್ವಕ್ಕೆ ಸಾಕ್ಷಿಯಾಗಿದೆ ಎಂದು ಮಠದ ಸಂಸ್ಥಾಪಕ ಸ್ವಾಮೀಜಿಗಳ ಬಗ್ಗೆ ತಿಳಿಸಿದರು.
ಫೆಬ್ರವರಿ 8 ಎಂಟನೇ ತಾರೀಕು ನಡೆಯುವ ಧಾರ್ಮಿಕ ಸಭೆಗೆ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗ ಸ್ವಾಮಿಗಳು ಸೇರಿದಂತೆ 150ಕ್ಕೂ ಹೆಚ್ಚು ವಿವಿಧ ಮಠಾಧೀಶರುಗಳು ಹಾಗೂ ಮೇಘಾಲಯ ರಾಜ್ಯ ಪಾಲರಾದ ವಿಜಯಶಂಕರ್, ಸಂಸದರುಗಳಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್, ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಈ ಭಾಗದ ಎಲ್ಲಾ ಶಾಸಕರುಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಿವ ದೀಕ್ಷ ಸಂಸ್ಕಾರ, ಸುಗಮ ಸಂಗೀತ ,ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ
ಕಾರ್ಯಕ್ರಮಕ್ಕೆ ಸುಮಾರು 15 ರಿಂದ 20,000 ಭಕ್ತರು ಬರುವ ನಿರೀಕ್ಷೆಯಿದ್ದು ಬರುವ ಎಲ್ಲಾ ಭಕ್ತರಿಗೆ ಮೂರು ಹೊತ್ತು ದಾಸೋಹ ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಬಗ್ಗೆ ಸವಿವರವಾಗಿ ತಿಳಿಸಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀಗಳ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಮಠದ ಟ್ರಸ್ಟಿ ಗಳಾದ ಬೆಳಲೆ ಶಿವಪಾದು, ಪೂಜಾ ಉಸ್ತುವಾರಿ ನೀಲಕಂಠ ಸ್ವಾಮಿ, ಮುಖಂಡ ನಾಗೇಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು