12:33 PM Wednesday5 - February 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರಕಾರದಿಂದ ರಾಜ್ಯ ಸೂತಕದ ಮನೆಯಾಗಿದೆ: ಹಾಸನದಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ರೈತರ ಖಾತೆಗೆ 48 ತಾಸಲ್ಲೇ ಬೆಂಬಲ ಬೆಲೆ ನೇರ ಜಮೆ; ಸಂಸತ್ ನಲ್ಲಿ… ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ಉದ್ಯಮಕ್ಕೆ ಸಹಕಾರ: ಕೇಂದ್ರ ಸಚಿವ ಕುಮಾರಸ್ವಾಮಿ DUO ಬ್ಲಾಕ್ ವಾಟರ್ ಸಾಫ್ಟನರ್: ಯುರಾಕ್ವಾ ಜತೆ ಕ್ರಿಸ್ಟಲ್ ಪ್ರೈವೇಟ್ ಲಿಮಿಟೆಡ್ ಪಾಲುದಾರಿಕೆ ನಾನು ಸ್ಪೀಕರ್, ನನಗೆ ನಾನೇ ಕಮಾಂಡರ್ ಎಂದ ಯು.ಟಿ. ಖಾದರ್ ವಿಧಾನಸೌಧದಲ್ಲಿ ಶ್ವಾನಗಳ… ಆರೋಗ್ಯಕರ ಸಮಾಜ ಕಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ: ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸಿಎಂ ಕರೆ ನಂಜನಗೂಡು: ಸಾಲ ತೀರಿಸದ ಸ್ನೇಹಿತ; ಮನನೊಂದು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಭಾರೀ ಗಾಳಿಗೆ ರಸ್ತೆಗೆ ಬಿದ್ದ ಬೃಹತ್ ಮರ; ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಂಚಾರ ಅಸ್ತವ್ಯಸ್ತ;… ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ… ಸಾಲಬಾಧೆ: ಮನನೊಂದ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಇತ್ತೀಚಿನ ಸುದ್ದಿ

ಮಡಿವಾಳ ಮಾಚಿದೇವರು ಸಮಾನತೆಗಾಗಿ ಹೋರಾಡಿದ ಮಹನೀಯರು: ಮಂಗಳೂರು ಮೇಯರ್

03/02/2025, 09:49

ಮಂಗಳೂರು(reporterkarnataka.com): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದ. ಕ. ಮಡಿವಾಳ ಸಂಘದ ಸಹಕಾರದೊಂದಿಗೆ ಮಡಿವಾಳ ಮಾಚಿದೇವ ಜಯಂತಿ ನಗರದ ತುಳುಭವನದಲ್ಲಿ ನಡೆಯಿತು.
ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಕಾರರಾದ ಮಾಚಿದೇವ ಮೇಲು-ಕೀಳು, ಜಾತಿಭೇದ, ಮಹಿಳೆಯರ ಶೋಷಣೆ, ಅಸಮಾನತೆ ಇದರ ವಿರುದ್ಧವಾಗಿ ಹೋರಾಡಿದ್ದಾರೆ. ಈ ಸಮಾಜದಲ್ಲಿನ ಎಲ್ಲಾ ಪಿಡುಗುಗಳನ್ನು ತೊಲಗಿಸುವ ಕಾರ್ಯದಲ್ಲಿ ಮಾಚಿದೇವರ ಕೊಡುಗೆ ಅಪಾರ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಮಾತನಾಡಿ, ಮಡಿವಾಳ ಮಾಚಯ್ಯನವರು ಜನಾಂಗದ ನೆಲೆಯಿಂದ ಗುರುತಿಸಿಕೊಂಡವರಲ್ಲ, ಸಾಮಾಜಿಕ ಕ್ರಾಂತಿಗಳನ್ನು ಮತ್ತು ಸಮಾಜಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡಿ ಗುರುತಿಸಿಕೊಂಡವರು. ಸಮಾಜ ಕಟ್ಟುವ ಕೆಲಸವನ್ನು ಅವರು ಮಾಡಿದ್ದಾರೆ. ಸಮಾಜದಲ್ಲಿ ಜನರು ಹೇಗೆ ಬೆಳೆಯಬೇಕು ಎಂಬ ಅಗತ್ಯ ವಿಷಯಗಳನ್ನು ಅವರು ತಮ್ಮ ವಚನದಲ್ಲಿ ಸಾರಿದ್ದಾರೆ ಎಂದರು.
ವೃತ್ತಿಯಲ್ಲಿ ಎಲ್ಲವೂ ಶ್ರೇಷ್ಠವಾದದ್ದು ಎಂದು ಮಡಿವಾಳ ಮಾಚಿದೇವ ‘ಅರಸುತನ ಮೇಲಲ್ಲ ಅಗಸತನ ಕೀಳಲ್ಲ’ ಎಂಬ ಮಾತಿನಲ್ಲಿ ವೃತ್ತಿಯ ಶ್ರೇಷ್ಠತೆಯನ್ನು ಸಾರಿದ್ದಾರೆ.ತಮ್ಮ ಶರಣ ತತ್ವಗಳನ್ನು, ವಚನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಂಘರ್ಷಗಳು ನಡೆದಾಗ ಅವುಗಳನ್ನು ಉಳಿಸಿಕೊಳ್ಳುವಲ್ಲಿ ಮಾಚಿದೇವರ ಪಾತ್ರ ಮಹತ್ವವಾದದ್ದು. ಮನುಷ್ಯರು ಮಾನವ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ವಿಚಾರಗಳಿಂದ ದೂರವಿದ್ದು ಒಳ್ಳೆಯ ಗುಣಗಳನ್ನು ಬೆಳೆಸಿದರೆ ಸಮಾಜ ಕಟ್ಟುವ ಕೆಲಸವಾಗುತ್ತದೆ ಎಂದು ಅವರು ಹೇಳಿದರು. ತಮ್ಮ ವಚನಗಳ ಮೂಲಕ ಮೂಢನಂಬಿಕೆ, ಕೆಟ್ಟ ಆಚಾರ ವಿಚಾರಗಳನ್ನು ನಾವು ಬದಿಗಿಟ್ಟು ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕು. ಮಾಚಿದೇವ ತೋರಿಸಿದಂತಹ ಬದುಕು ಕಟ್ಟಿಕೊಳ್ಳುವ ವೈಚಾರಿಕ ನೆಲೆಗಳನ್ನು ನಮ್ಮೊಳಗೆ ತುಂಬಿಕೊಂಡು ಬದುಕನ್ನು ಯಶಸ್ವಿಗೊಳಿಸಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಮಾತನಾಡಿ, ವಚನಗಳನ್ನು ನಾಶ ಮಾಡುವ ಕ್ರಾಂತಿ ನಡೆದಾಗ ಅವುಗಳನ್ನು ಎದುರಿಸಿ ವಚನಗಳನ್ನು ಉಳಿಸಿದಂತಹ ಶಕ್ತಿವಂತ, ಧೀರತ್ವದ ವ್ಯಕ್ತಿ ಮಡಿವಾಳ ಮಾಚಿದೇವ. ಅವರ ತತ್ವಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಡಿವಾಳ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು