12:27 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ದುರಾಡಳಿತ: ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಸದಸ್ಯ ಜವಳಿ ಆರೋಪ

28/01/2025, 22:39

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ಅಧಿಕಾರ ಚುಕ್ಕಾಣಿ ಹಿಡಿದ ನಂತರ ದುರಾಡಳಿತ ನಡೆಸುತ್ತಿದ್ದಾರೆ ಎಂದುಬಿಜೆಪಿ ಸದಸ್ಯ ಸಂದೇಶ ಜವಳಿ ವಾಗ್ದಾಳಿ ನಡೆಸಿದರು.
ಪಟ್ಟಣ ಪಂಚಾಯತ್ ಮುಂಭಾಗ ಬಿಜೆಪಿ ಸದಸ್ಯರುಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಯಾಗಿ ತನ್ನ ಆದಾಯದ ಮೂಲದಲ್ಲಿ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕಾದ ಬದ್ಧತೆ ಪ್ರದರ್ಶಿಸಬೇಕಿತ್ತು. ಈ ಕಾಳಜಿ ಈಗಿನ ಅಧ್ಯಕ್ಷರಲ್ಲಿ ಇಲ್ಲ. ಬಹಳ ವರ್ಷಗಳ ಕಾಲದಿಂದ ಶ್ರಮವಹಿಸಿ ಕಟ್ಟಿಸಿದ್ದ ಗೋಪಾಲಗೌಡ ರಂಗಮಂದಿರ ಉಸ್ತುವಾರಿ ಇಲ್ಲದೇ ಹಾಳಾಗುತ್ತಿದೆ. ಪ್ರತಿದಿನ 200 ವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡಲು ಸೋಲಾರ್ ಅಳವಡಿಸಲಾಗಿತ್ತು. ಅದನ್ನು ಉಸ್ತುವಾರಿ ವಹಿಸದೇ 50-60 ಯುನಿಟ್ ವಿದ್ಯುತ್ ಕೂಡಾ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಾರೆ. ಪಟ್ಟಣದಲ್ಲೆಲ್ಲಾ ವಾಸನೆ ಬರುತ್ತಿದೆ. ಅದನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಮೊದಲೆಂದು ನಡೆಯದಿದ್ದ ಈ ಕ್ರಮಗಳು ಈಗೇಕೆ ನಡೆಯುತ್ತಿದೆ ಎಂಬುದಕ್ಕೆ ಆಡಳಿತವೇ ಉತ್ತರಿಸಬೇಕು. ಬೀದಿ ಬದಿ ವ್ಯಾಪಾರಿಗಳನೇಕರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡುವ ಅಥವಾ ಅಲ್ಲಿಂದ ತೆಗೆಸುವ ಕೆಲಸ ಆಡಳಿತ ಮಾಡುತ್ತಿಲ್ಲ ಎಂದರು.
ಕಳೆದ ಸಾಲಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆವು ಎನ್ನುತ್ತಾರೆ. ಈಗಲೂ ಪಟ್ಟಣದಾದ್ಯಂತ ನಾಯಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವೇನು? ಎಂದು ಪ್ರಶ್ನಿಸಿದರು. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಯಾವುದೇ ಜನನ ಮರಣ ಪ್ರಮಾಣ ಪತ್ರಕ್ಕೆ ಬಂದರೂ ತಮ್ಮ ಬಳಿ ತರಬೇಕೆಂಬ ಧೋರಣೆಯನ್ನು ಹೊಂದಿ ಅಧಿಕಾರಿಗಳೊಂದಿಗೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಖಾತೆ ಬದಲಾವಣೆಗೆ ಒಂದು ತಿಂಗಳ ಗಡುವಿದ್ದರೂ ಮೂರು ತಿಂಗಳಾದರೂ ಅರ್ಜಿ ಇಲ್ಲ ಎಂಬ ಉತ್ತರ ಅರ್ಜಿದಾರನಿಗೆ ಸಿಗುತ್ತಿದೆ. ನ್ಯಾಯಾಲಯದಿಂದ ಸೇಲ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಅನುಮತಿ ನೀಡಿ ಎಂಬ ಆದೇಶ ಬಂದರೆ ಬರೀ ಹಕ್ಕುಪತ್ರ ಮಾತ್ರವಿದ್ದು ಬೇರೆ ಯಾವ ದಾಖಲೆ ಇಲ್ಲದ ವ್ಯಕ್ತಿಗೂ ಕಟ್ಟಡ ಕಟ್ಟಲು ಪರವಾನಗಿ ನೀಡುತ್ತಾರೆ.
ರಿಯಲ್ ಎಸ್ಟೇಟ್ ದಂಧೆ ಬೆಂಬಲಿಸುತ್ತಿದ್ದಾರಾ? ಅನಧಿಕೃತ ಕಟ್ಟಡಗಳು ಬೇಕಾದಷ್ಟು ತಲೆ ಎತ್ತಿ ನಿಂತಿವೆ. ಪಟ್ಟಣ ಪಂಚಾಯಿತಿಯ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಇರುವ ಆದಾಯ ಮೂಲದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ ಎಂದು ಹರಿಹಾಯ್ದರು.
ಮಂಗಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೆ ಅವುಗಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಮುತುವರ್ಜಿ ವಹಿಸುತ್ತಿಲ್ಲ. ಬೀದಿನಾಯಿ, ಜಾನುವಾರು ಮತ್ತು ಮಂಗಗಳ ಕಾಟದಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹಾ ಅನೇಕ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮಕೈಗೊಳ್ಳದೇ ಹುಲಿವೇಷ ಸ್ಪರ್ಧೆ ನಡೆಸಿದೆ, ಆಳ್ವಾಸ್ ಕಾರ್ಯಕ್ರಮ ಮಾಡಿಸಿದೆ, ಕ್ರಿಕೆಟ್ ನಡೆಸಿದೆ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು
ಬಿಜೆಪಿ ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಮಾಡಿಸಲು ಎಲ್ಲವೂ ನಿಯಮಬದ್ಧ ವಾಗಬೇಕೆಂದು ಯಾವುದೇ ಕೆಲಸ ಮಾಡಿಸದೇ ಕಾಲ ಹರಣ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರ ವಾರ್ಡಿನಲ್ಲಿ ಯಾವ ನಿಯಮವೂ ಇಲ್ಲದೇ ಕಾಮಗಾರಿಗಳು ನಡೆಯುತ್ತಿವೆ.
ಯಾವಾಗಲೋ ನಡೆದ ಕಾಮಗಾರಿಗಳಿಗೂ ಈಗ ಹಣ ಸಂದಾಯವಾಗುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಪ.ಪಂ. ಸದಸ್ಯರುಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು