12:25 AM Sunday5 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಶ್ರೀ ವೆಂಕಟ್ರಮಣ ದೇವರ ನೂತನ ಚಂದ್ರ ಮಂಡಲ ವಾಹನ ಹಸ್ತಾಂತರ

19/01/2025, 21:44

ಮಂಗಳೂರು(reporterkarnataka.com): ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಶ್ರೀ ದೇವರ ಉತ್ಸವವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ಚಂದ್ರ ಮಂಡಲ ವಾಹನದ ಹಸ್ತಾಂತರ ಕಾರ್ಯಕ್ರಮ ಇಂದು ಕುಂಭಾಶಿಯಲ್ಲಿರುವ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ನಡೆಯಿತು.
ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ​ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು .
ಜನವರಿ 20 ಸೋಮವಾರ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಪಾದುಕಾ ಪುರಪ್ರವೇಶ, ನೂತನ ಚಂದ್ರ ಮಂಡಲ ವಾಹನ ಪುರಪ್ರವೇಶ, ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ನಡೆಯಲಿದೆ . ಶ್ರೀ ವೀರ ವೆಂಕಟೇಶ ದೇವರ ಉತ್ಸವ ಕಾರ್ಯಕ್ರಮ ಉದ್ಧಿಶ್ಯ ನೂತನವಾಗಿ ನಿರ್ಮಿಸಲಾದ ಚಂದ್ರಮಂಡಲ ವಾಹನದ ಪುರಪ್ರವೇಶ ಕಾರ್ಯಕ್ರಮ ಜೊತೆಗೆ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾದ ಶ್ರೀ ಗುರು ಪಾದುಕಾ ಯಾತ್ರೆಯ ಪುರಪ್ರವೇಶ ಹಾಗೂ ಮಂಗಳೂರು ರಥೋತ್ಸವ ಪ್ರಯುಕ್ತ ಶ್ರೀ ದೇವಳಕ್ಕೆ ಆಗಮಿಸಲಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಂದು ರಾತ್ರಿ 7 ಗಂಟೆಗೆ ಸರಿಯಾಗಿ ಡೊಂಗರಕೇರಿಯಲ್ಲಿರುವ ಕೆನರಾ ಹೈ ಸ್ಕೂಲ್ ಬಳಿಯಿಂದ ಮೆರವಣಿಗೆ ಹೊರತು ಡೊಂಗರಕೇರಿ , ನ್ಯೂ ಚಿತ್ರಾ ಜಂಕ್ಷನ್ ಮೂಲಕ ಬಿ . ಎಂ . ಹೈಸ್ಕೂಲ್ ರಸ್ತೆ , ರಥಬೀದಿ ಮೂಲಕ ಶ್ರೀ ದೇವಳಕ್ಕೆ ಭವ್ಯ ಮೆರವಣಿಗೆ ತಲುಪಲಿರುವುದು.

ಇತ್ತೀಚಿನ ಸುದ್ದಿ

ಜಾಹೀರಾತು