ಇತ್ತೀಚಿನ ಸುದ್ದಿ
ಮುಲ್ಲಕಾಡು ಸರಕಾರಿ ಶಾಲೆಗೆ 13.40 ಲಕ್ಷ ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಾಣ: ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟನೆ
18/01/2025, 16:05
ಸುರತ್ಕಲ್(reporterkarnataka.com): ವಾರ್ಡ್ 18 ಕಾವೂರು ವ್ಯಾಪ್ತಿಯಲ್ಲಿ ಬರುವ
ಮುಲ್ಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿ ಹಾಗೂ ಮೇಯರ್ ಅನುದಾನದಲ್ಲಿ 13.40 ಲಕ್ಷ ವೆಚ್ಚದ ನೂತನ ಶೌಚಾಲಯವನ್ನು ಶಾಸಕ ಡಾ. ಭರತ್ ಶೆಟ್ಟಿ ಅವರು ಉದ್ಘಾಟಿಸಿದರು.
ಮೇಯರ್ ಮನೋಜ್ ಕುಮಾರ್ , ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ಎ. ರಾವ್, ಶಾಲೆಯ ಮುಖ್ಯೋಪಾಧ್ಯಾಯರಾದ ಉಶ್ಮನ್ ಜಿ.ಕೆ., ಶಿಕ್ಷಕ ವೃಂದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಭರತ್ ರಾಜ್, ಬಿಜೆಪಿ ವಾರ್ಡ್ ಅಧ್ಯಕ್ಷ ಕೊರಗಪ್ಪ ಶೆಟ್ಟಿ, ಕಾರ್ಯದರ್ಶಿ ಜಗದೀಶ್ ಅಂಚನ್, ಯುವಮೋರ್ಚಾ ಮಂಡಲ ಅಧ್ಯಕ್ಷರಾದ ರಕ್ಷಿತ್ ಪೂಜಾರಿ, ಶಾಲಾಭಿಮಾನಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.