ಇತ್ತೀಚಿನ ಸುದ್ದಿ
ವುಶು ಚಾಂಪಿಯನ್ ಶಿಪ್: ಅಂತರ್ ಶಾಲಾ ಸಬ್ ಜೂನಿಯರ್ ವಿಭಾಗದಲ್ಲಿ ಹರ್ಷಲ್‌ಗೆ ಚಿನ್ನದ ಪದಕ
15/01/2025, 12:23
ಮಂಗಳೂರು(reporterkarnataka.com): ಮೂರನೇ ಅಂತರ್ ಶಾಲಾ ಮತ್ತು ಅಂತರ್ ಜಿಲ್ಲಾ ವುಶು ಚಾಂಪಿಯನ್‌ಶಿಪ್-2025 ಸ್ಪರ್ಧೆಯಲ್ಲಿ ಅಂತರ್ ಶಾಲಾ ಸಬ್ ಜೂನಿಯರ್ ವಿಭಾಗದಲ್ಲಿ ಹರ್ಷಲ್ ಎನ್. ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ.
ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜ.12ರಂದು ಸ್ಪರ್ಧೆ ನಡೆಯಿತು.
ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಲ್, ಪಚ್ಚನಾಡಿ ಬಂಗೇರು ಸೀಮೆ ನಿವಾಸಿ ನವೀನ್‌ಚಂದ್ರ ಮತ್ತು ಜಯಶ್ರೀ ದಂಪತಿ ಪುತ್ರ.