7:55 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅತಿ ಹೆಚ್ಚು ಟ್ರಾಫಿಕ್: ವಿಶ್ವದಲ್ಲೇ ಬೆಂಗಳೂರಿಗೆ 3ನೇ ಸ್ಥಾನ; 10 ಕಿಮೀ ಸಾಗಲು 30 ನಿಮಿಷ 10 ಸೆಕೆಂಡ್!

13/01/2025, 10:20

ಬೆಂಗಳೂರು(reporterkarnataka.com): ಬೆಂಗಳೂರು ಮತ್ತೆ ವಿಶ್ವಮಟ್ಟದಲ್ಲಿ ಸುದ್ದಿಯಲ್ಲಿದೆ. ಸಿಲಿಕಾನ್ ಸಿಟಿ ಪ್ರಪಂಚದ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ 3ನೇ ಸ್ಥಾನದಲ್ಲಿದೆ. ಖಾಸಗಿ ವಾಹನಗಳ ಸಂಖ್ಯೆ ವಿಪರೀತ ಏರಿಕೆಯಾಗುತ್ತಿರುವುದೇ ಇಲ್ಲಿನ ಟ್ರಾಫಿಕ್ ಗೋಳಿಗೆ ಮೂಲ ಕಾರಣವಾಗಿದೆ.
2024ರ ಟಾಂ ಟಾಂ ಟ್ರಾಫಿಕ್ ಇಂಡೆಕ್ಸ್ ರಿಪೋರ್ಟ್ ಪ್ರಕಾರ ವಿಶ್ವದ ಸ್ಲೋಯೆಸ್ಟ್ ಸಿಟಿಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಟಾಪ್ 5 ಸ್ಥಾನಗಳಲ್ಲಿ ಭಾರತದ 4 ನಗರಗಳೇ ಇವೆ. ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್ ಹಾವಳಿ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ.
ಲೋಕೇಶನ್ ಟೆಕ್ನಾಲಜಿ ಸಂಸ್ಥೆ ಟಾಂ ಟಾಂ ಡಚ್ ಮೂಲದ ಸಂಸ್ಥೆಯಾಗಿದೆ. ವಿಶ್ವದ ಪ್ರಮುಖ ನಗರಗಳ ಟ್ರಾಫಿಕ್ ಸ್ಥಿತಿಗತಿಗಳ ಬಗ್ಗೆ ಇದು ಪ್ರತಿ ವರ್ಷ ಅಧ್ಯಯನ ನಡೆಸಿ ಪಟ್ಟಿ ಸಿದ್ಧಪಡಿಸುತ್ತದೆ. 2024ರ ವರದಿಯಲ್ಲಿ ಕೊಲಂಬಿಯಾದ ಬರಾಂಕ್ವಿಲ್ಲಾ ನಗರ ಮೊದಲ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನವನ್ನು ಕೋಲ್ಕತ್ತಾ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ದಿನೇ ದಿನೇ ತೀವ್ರವಾಗಿ ಏರಿಕೆಯಾಗುತ್ತಿರುವುದು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ದೇಶದ ರಾಜಧಾನಿ ದೆಹಲಿಗೆ ಹೋಲಿಸಿದರೆ, ಕೆಲವು ವರ್ಷಗಳ ಹಿಂದೆ ಇದ್ದ ಖಾಸಗಿ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಸುಮಾರು 2.5 ಮಿಲಿಯನ್ ಖಾಸಗಿ ವಾಹನಗಳಿವೆ. ದಿನಕ್ಕೆ 2 ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದೇ ನಗರದಲ್ಲಿ ಟ್ರಾಫಿಕ್ ಒತ್ತಡಕ್ಕೆ ಮೂಲವಾಗಿದೆ.
ಬೆಂಗಳೂರಿನಲ್ಲಿ 10 ಕಿಮೀ ದೂರ ಪ್ರಯಾಣ ಮಾಡಲು ಸರಾಸರಿ 30 ನಿಮಿಷ 10 ಸೆಕೆಂಡ್ ಬೇಕಂತೆ. ಇದು 2023ಕ್ಕೆ ಹೋಲಿಕೆ ಮಾಡಿದರೆ 50 ಸೆಕೆಂಡ್ ಹೆಚ್ಚಾಗಿದೆ. ಉಳಿದಂತೆ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಬರಾಂಕ್ವಿಲ್ಲಾದಲ್ಲಿ 10 ಕಿಮೀ ಪ್ರಯಾಣ ಮಾಡಲು ಸರಾಸರಿ 36 ನಿಮಿಷ 6 ಸೆಕೆಂಡ್ ಬೇಕಂತೆ. ಕೋಲ್ಕತ್ತಾದಲ್ಲಿ ಈ ಸಮಯ ಸರಾಸರಿ 34 ನಿಮಿಷ 33 ಸೆಕೆಂಡ್ ಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು