5:50 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಜ.23ರಿಂದ ಕದ್ರಿ ಪಾರ್ಕ್ ನಲ್ಲಿ ಫಲ ಪುಷ್ಪ ಪ್ರದರ್ಶನ; ಮಕ್ಕಳಿಗೆ ಮನರಂಜನೆ, ಸೆಲ್ಫೀ ಝೋನ್

09/01/2025, 23:09

ಮಂಗಳೂರು(reporterkarnataka.com): ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹಾಗೂ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ, ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಜನವರಿ 23 ರಿಂದ 26 ರವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದೆ.

* *ಪ್ರಮುಖ ಆಕರ್ಷಣೆಗಳು*: ಸುಮಾರು 20 ಸಾವಿರ ಸಂಖ್ಯೆಯ ಮೂವತ್ತು ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೂನಿಯಾ, ಟೊರಿನೋ, ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು, ಪ್ರದರ್ಶನದಲ್ಲಿ ಜೋಡಿಸಲಾಗುತ್ತದೆ.
ಹೂವುಗಳಿಂದ ಹಾಗೂ ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿಯನ್ನು ತಯಾರಿಸಿ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಫೋಟೋ ಪ್ರೇಮ್, ಸೆಲ್ಫೀ ಜೋನ್ ಮಾದರಿಗಳನ್ನು ನಿರ್ಮಿಸಲಾಗುವುದು.
ಜಿಲ್ಲೆಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಕಲಾಕೃತಿಗಳನ್ನು ಹಣ್ಣು/ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗುತ್ತದೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಏರ್ಪಡಿಸಲಾಗುವುದು.
ರೈತರು ಬೆಳೆದಿರುವಂತಹ ವಿಶಿಷ್ಠ ಬಗೆಯ ಹಣ್ಣು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳು, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುತ್ತದೆ.
ವಿವಿಧ ಮಳಿಗೆಗಳಿಗೆ ಬೃಹತ್ ಗಾತ್ರದ ನರ್ಸರಿ ಮಳಿಗೆ(60*40 ಅಡಿ) ರೂ.20,000, ಮದ್ಯಮ ಗಾತ್ರದ ನರ್ಸರಿ ಮಳಿಗೆ(30*40 ಅಡಿ) ರೂ.15,000, ಇತರೆ ಮಳಿಗೆ(20*10ಅಡಿ) ರೂ.10,000, ಪ್ರದರ್ಶನ ಮಳಿಗೆ(10*10 ಅಡಿ) ರೂ. 6,000, ಸ್ವಸಹಾಯ ಸಂಘ(10*10 ಅಡಿ) ರೂ. 2,000ದಂತೆ ದರ ನಿಗದಿಪಡಿಸಲಾಗಿದೆ. ಮಳಿಗೆ ತೆರೆಯಲು ಆಸಕ್ತರು ತಮ್ಮ ಹೆಸರನ್ನು ಜ.18 ರ ಮುಂಚಿತವಾಗಿ ನೋಂದಾಯಿಸಬೇಕು ಹಾಗೂ ರೈತರು ಬೆಳೆದಂತಹ ಪ್ರದರ್ಶಿಕೆಗಳನ್ನು ಜ.22 ರಂದು ಬೆಳಿಗ್ಗೆ 10.30 ಕ್ಕೆ ಕದ್ರಿ ಉದ್ಯಾನವನಕ್ಕೆ ತರಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಮಳಿಗೆಗಳಿಗೆ ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣ ಬೆಂದೂರು ,ಮಂಗಳೂರು (ದೂರವಾಣಿ ಸಂ: 9845523944, 9483110621) ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು