ಇತ್ತೀಚಿನ ಸುದ್ದಿ
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ
06/01/2025, 22:50
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಸಮೀಪದ ಕಿತ್ತನಗದ್ದೆ ನಾಡ್ತಿ ಹೊಳೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರಳು ಮಾಫಿಯ ಜಾಲವೊಂದರ ಬಗ್ಗೆ ತಿಳಿದು ದಾಳಿ ಮಾಡಿರುವ ತಹಸೀಲ್ದಾರ್ ಮತ್ತು ತಂಡ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತನಗದ್ದೆ ನಾಡ್ತಿ ಹೊಳೆಯಲ್ಲಿ ಬೃಹತ್ ಪ್ರಮಾಣದ ಮರಳು ಮಾಫಿಯ ಜಾಲವೊಂದು ಪತ್ತೆಯಾಗಿದೆ. ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಎಸ್. ಮಾಮೂಲಿನಂತೆ ಗಸ್ತು ತಿರುಗುವ ವೇಳೆ ಅಚಾನಕ್ ಮರಳು ಸಾಗಿಸುವ ವಾಹನ ಎದುರಾಗಿದ್ದು, ಅನುಮಾನದಿಂದ ಹಿಂಬಾಲಿಸಿದಾಗ ಹೊಳೆಯ ತುಂಬೆಲ್ಲ ಮರಳನ್ನು ಮೇಲೇತ್ತಲು ಹಾಗೂ ಅದನ್ನು ಫಿಲ್ಟರ್ ಮಾಡಲು ಬಳಸುವ ವಿನೂತನ ಸಾಧನಗಳು ಹಾಗೂ ಅಲ್ಲಲ್ಲಿ ಜರಡಿ ಹಿಡಿದಿಟ್ಟ ದಿಮ್ಮಿಗಳಿಂದ ಕೂಡಿದ ಫಿಲ್ಟರ್ ಕಂಡು ಬಂದ ಹಿನ್ನಲೆ ಇದೊಂದು ದೊಡ್ಡ ಮರಳು ಮಾಫಿಯ ಎಂದು ತಿಳಿದು ಹೊಳೆಯಲ್ಲಿದ್ದ ವಿನೂತನ ವಾಹನಗಳನ್ನು ತಹಶೀಲ್ದಾರ್ ರಂಜಿತ್ ವಶ ಪಡಿಸಿಕೊಂಡು ಪೊಲೀಸ್ ಕಷ್ಟಡಿಗೆ ಒಪ್ಪಿಸಿದ್ದಾರೆ.
ಈ ವೇಳೆ ಮರಳು ಕೊರೆಯಲ್ಲಿದ್ದ ಮರಳು ತುಂಬುತ್ತಿದ್ದ ಕೆಲಸಗಾರರು ಓಡಿ ಹೋಗಿದ್ದಾರೆ. ಜೊತೆಗೆ ಇಷ್ಟೊಂದು ಧಾರಾಳವಾಗಿ ಮಾಡಿದ ವಿನೂತನ ಮರಳು ಕಳ್ಳ ಸಾಗಾಣಿಕೆಯಲ್ಲಿ ದೊಡ್ಡ ದೊಡ್ಡವರ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಈ ಪ್ರಕರಣ ಹೇಗೆ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.