8:12 AM Wednesday8 - January 2025
ಬ್ರೇಕಿಂಗ್ ನ್ಯೂಸ್
ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ

ಇತ್ತೀಚಿನ ಸುದ್ದಿ

ಎಂಎಸ್ ಪಿ ಕಾನೂನು ಜಾರಿಗೊಳಿಸಿ ರೈತರ ಉಳಿಸಿ ಹೋರಾಟ ಕೈಗೆತ್ತಿಕೊಂಡ ಬಿ. ಆರ್. ಪಾಟೀಲ್: ವಿಧಾನ ಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ

04/01/2025, 22:08

ಬೆಂಗಳೂರು(reporterkarnataka.com):ಎಂಎಸ್ ಪಿ ಶಾಸನಬದ್ಧಗೊಳಿಸಿ ರೈತರನ್ನು ಉಳಿಸಿ ಹೋರಾಟವನ್ನು ಕರ್ನಾಟಕ ರಾಜ್ಯದ ರೈತರ ಪ್ರತಿನಿಧಿ ಬಿ. ಆರ್. ಪಾಟೀಲ್ ಅವರು ಕೈಗೆತ್ತಿಕೊಂಡಿದ್ದಾರೆ.
ಪ್ರೊ. ಎಂ.ಎಸ್. ಸ್ವಾಮಿನಾಥನ್ ವರದಿಯ ಅನ್ವಯ ರೈತರ ಬೆಳೆಗಳಿಗೆ ಸಿ ೨ + ೫೦% ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂಬುದು ರೈತರ ಹಕ್ಕೋತ್ತಾಯವನ್ನು ಬೆಂಬಲಿಸಿ ಶ್ರೀ ಜಗತ್ ಸಿಂಗ್ ದಲ್ಲೈವಾಲ ಅವರು ನವೆಂಬರ್ ೨೬, ೨೦೨೪ ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ತೀವ್ರಹದಗೆಟ್ಟಿದ್ದರಿಂದ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ಪಂಜಾಬ್ ಪಕ್ಕದ ಖನೌರಿ ಬಾರ್ಡರ್ ಆಸ್ಪ್ರತ್ರೆಗೆ ದಾಖಲಿಸಲಾಗಿದೆ.


ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಹೆಸರಾಂತ ಹೋರಾಟಗಾರರು, ಅಳಂದ ಶಾಸಕ ಬಿ ಆರ್ ಪಾಟೀಲ್ ಅವರು ಇಂದು ವಿಧಾನ ಸೌಧ ಹಾಗೂ ವಿಕಾಸ ಸೌಧದ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಎದುರು ದಲ್ಲೈವಾಲ ಅವರನ್ನು ಉಳಿಸಿ ಮತ್ತು ರೈತರಿಗೆ ಎಂ ಎಸ್ ಪಿ ಶಾಸನಬದ್ಧಗೊಳಿಸಿ ರೈತರನ್ನು ಉಳಿಸಿ ಎಂದು ಒಂದು ದಿನದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಕರ್ನಾಟಕದ ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಕಾಂ ಮೋಹನ್ ಕುಮಾರ್ ಕೊಂಡಜ್ಜಿ, ರೈತ ಹೋರಾಟಗಾರ ರೈತ ಮುಖಂಡ ವೀರಸಂಗಯ್ಯ ಇನ್ನಿತರರು ಪಾಲ್ಗೊಂಡರು.
ಪಾಟೀಲರ ಈ ಸಾಂಕೇತಿಕ ಹೋರಾಟಕ್ಕೆ ಇಡೀ ರಾಜ್ಯದ ರೈತರು ರೈತ ಮುಖಂಡರು ಮತ್ತು ರೈತಪರ ಕಾಳಜಿಯ ಪ್ರತಿಯೊಬ್ಬರ ಬೆಂಬಲವೂ ಇದೆ ಎಂಬುದನ್ನು ಹೇಳಬೇಕಿಲ್ಲ. ಎಲ್ಲರ ಬೆಂಬಲ ಅವರಿಗಿದೆ. ಇಡೀ ರಾಜ್ಯದ ರೈತ ಕುಲದ ಪ್ರತಿನಿಧಿಯಾಗಿ ಬಿ.ಆರ್. ಪಾಟೀಲರು ಪ್ರತಭಟನೆಯಲ್ಲಿ ತೊಡಗಿದ್ದಾರೆ.
ಮೂರು ಲೋಕ ಸಭಾ ಚುನಾವಣೆಗಳಿಗೂ ಮುನ್ನ ರೈತರ ಬೆಳೆಗಳಿಗೆ ಎಂ.ಎಸ್.ಪಿ ನೀಡುವುದಾಗಿ ಆಶ್ವಾಸನೆ ನೀಡಿದ್ದ ಆಗಿನ ಮತ್ತು ಈಗಿನ ಪ್ರಧಾನಿ ಎಂ.ಎಸ್.ಪಿ ಶಾಸನಬದ್ಧಗೊಳಿಸಿಲ್ಲ. ಹಿಂದೊಮ್ಮೆ ಎಂಎಸ್.ಪಿ ಕೊಂಚ ಹೆಚ್ಚಿಸಿ ಅದನ್ನೇ ಸಿ೨ + ೫೦% ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ದುಸ್ಸಾಹಸಕ್ಕೂ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಮುಂದಾಗಿತ್ತು. ಅದಾಗ ಖುದ್ದು ಸ್ವಾಮಿನಾಥನ್ ಇದು ತಾವು ಸೂಚಿಸಿದ್ದ ಸಿ೨+೫೦% ಅಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು