2:46 AM Monday6 - January 2025
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ…

ಇತ್ತೀಚಿನ ಸುದ್ದಿ

ಬಿಕಾಂ ಪರೀಕ್ಷೆಯಲ್ಲಿ ರಾಮೇಶ್ವರ ಪ್ರಥಮ ದರ್ಜೆಯಲ್ಲಿ ಉತ್ತಿರ್ಣ!: ಪಾಸ್ ಆಗಲು ಮುಖ್ಯ ಕಾರಣ ಆಯ್ತಾ ಕೆಎಎಸ್?

02/01/2025, 21:29

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಅತ್ಯಂತ ವೈಭವದಿಂದ ತೆರೆ ಬಿದ್ದಿದ್ದು, ಈ ಜಾತ್ರೆಯನ್ನು ಬಿಕಾಂ ಪರೀಕ್ಷೆ ಎಂದೇ ಬಿಂಬಿಸಲಾಗಿತ್ತು. ಈಗ ಆ ಬಿಕಾಂ ಪರೀಕ್ಷೆಯನ್ನು ರಾಮೇಶ್ವರನೂ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಿದ್ದಾನೆ.
ಹೌದು ಈ ಬಾರಿಯ ಜಾತ್ರೆ ಪಬ್ಲಿಕ್ ಪರೀಕ್ಷೆಗಿಂತಲೂ ಕಷ್ಟವಾಗಿತ್ತು. ಮೊದಲಿಗೆ ಪರೀಕ್ಷೆಗೆ ಓದಲು ಪುಸ್ತಕ ಕೊಟ್ಟಾಗಲೇ ಪುಸ್ತಕದ ಬಗ್ಗೆ ಗಲಾಟೆಯಾಗಿ ಎರಡು ಪುಸ್ತಕಗಳನ್ನು ಮಾಡಲಾಯಿತು. ಒಂದೇ ಪುಸ್ತಕ ಓದುವುದು ಕಷ್ಟ ಅಂತಹದರಲ್ಲಿ ಎರಡು ಪುಸ್ತಕ ಓದಿ ಪರೀಕ್ಷೆ ಪಾಸ್ ಆಗುವುದು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಆದರೆ ಪರೀಕ್ಷೆ ಬರೆಯಲು ಕುಳಿತ ಮೇಲೆ ಪುಸ್ತಕದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂಬಂತೆ ಪರೀಕ್ಷೆಗೆ ತಯಾರಿ ಮಾಡಲಾಯಿತು.
ನಂತರ ಎರಡು ಪುಸ್ತಕದ ಪಾಠಗಳನ್ನು ಒಂದೇ ಪುಸ್ತಕಕ್ಕೆ ತರಲಾಯಿತು. ಆಗ ಅನಿಸಿದ್ದು ಈ ಬಿ.ಕಾಂ ಪರೀಕ್ಷೆ ಬೇಕಿತ್ತಾ ಎಂದು. ಆದರೆ ಇದ್ಯಾವುದಕ್ಕೂ ಜಗ್ಗದೆ ಪರೀಕ್ಷೆ ಬರೆಯಲು ಮುಂದಾದ ರಾಮೇಶ್ವರನು ತನ್ನ ಸಹಾಯಕ್ಕೆ ಕರೆಸಿಕೊಂಡಿದ್ದು ಕೆ. ಎ . ಎಸ್ ಓದಿದವರನ್ನು. ಬಿ. ಕಾಂ ಪಾಸ್ ಆಗಲು ಟ್ಯೂಷನ್ ಬೇಕೇ ಬೇಕು ಎಂದು ತೀರ್ಮಾನಿಸಿ ತೀರ್ಥಹಳ್ಳಿಗೆ ಕೆ. ಎ ಎಸ್ ತಂಡವೇ ಬಂತೋ ಆಗ ಪರೀಕ್ಷೆಗೆ ಮತ್ತಷ್ಟು ರೋಚಕತೆ ಬಂತು.
ಸ್ವತಃ ರಾಮೇಶ್ವರನೇ ಬಿಕಾಂ ಪರೀಕ್ಷೆ ಬರೆಯುತ್ತಾನೆ ಎಂದು ವಿಷಯ ತಿಳಿದ ಕುಟುಂಬಸ್ಥರು ಈ ಪರೀಕ್ಷೆ ಹೇಗಿರಲಿದೆ? ಪರೀಕ್ಷೆ ಪಾಸ್ ಆಗುತ್ತಾ? ಅಥವಾ ಪರೀಕ್ಷೆಗೆ ಯಾರಾದರೂ ಅಡ್ಡಿ ಪಡಿಸುತ್ತಾರ? ಎಂದು ಭಯ ಪಟ್ಟಿದ ರಾಮೇಶ್ವರನ ಕುಟುಂಬಸ್ಥರಿಗೆ ಕಡೆಗೂ ಸಮಾಧಾನ ತರುವ ವಿಷಯ ಸಿಕ್ಕಿದೆ. ಮೂರು ದಿನ ನಡೆದ ಮಹಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣ ಹೊಂದುವ ಮೂಲಕ ಎಷ್ಟೇಷ್ಟೋ ಪರೀಕ್ಷೆ ಬರೆದಿದ್ದು ಬಿ. ಕಾಂ ಪರೀಕ್ಷೆ ಒಂದು ಲೆಕ್ಕವೇ ಎಂದು ರಾಮೇಶ್ವರನೇ ಹೇಳಿದಂತಿದೆ.

ಅದೇನೇ ಆಗಲಿ ರಾಮೇಶ್ವರನು ಬಿಕಾಂ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣವಾಗುವುದಕ್ಕೆ ಕೆ ಎ ಎಸ್ ತಂಡದವರ ಟ್ಯೂಷನ್ ಕೂಡ ಮುಖ್ಯವಾಗಿತ್ತು. ಮೂರು ದಿನಗಳ ಕಾಲ ರಾಮೇಶ್ವರನನ್ನು ಪಾಸ್ ಮಾಡಲು ಪಣ ತೊಟ್ಟು ಕಡೆಗೂ ಪ್ರಥಮ ದರ್ಜೆಯಲ್ಲಿ ಉತ್ತಿರ್ಣ ಮಾಡಿ ಕೆ ಎ ಎಸ್ ತಂಡ ವಾಪಾಸ್ ಆಗಿದೆ.
ರಾಮೇಶ್ವರನ ಕುಟುಂಬದವರು ಕೆ ಎ ಎಸ್ ತಂಡಕ್ಕೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು