1:10 PM Sunday18 - January 2026
ಬ್ರೇಕಿಂಗ್ ನ್ಯೂಸ್
ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.…

ಇತ್ತೀಚಿನ ಸುದ್ದಿ

ಮಂಜನಾಡಿ ಗ್ಯಾಸ್ ದುರಂತ; ಸರಕಾರದಿಂದ 15 ಲಕ್ಷ, ಗ್ಯಾಸ್ ಕಂಪೆನಿಯಿಂದ 20 ಲಕ್ಷ ಪರಿಹಾರ: ಸ್ಪೀಕರ್ ಖಾದರ್

30/12/2024, 22:50

ಮಂಗಳೂರು(reporterkarnataka.com): ಮಂಜನಾಡಿ ಗ್ಯಾಸ್ ಸಿಲಿಂಡರ್ ದುರಂತದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ಜನರನ್ನು ಬದುಕಿಸಲು ಸಕಲ ಪ್ರಯತ್ನಗಳನ್ನು ನಡೆಸಿಯೂ ನಿನ್ನೆ 3ನೇ ಗಾಯಾಳುವೂ ಮೃತಪಟ್ಟಿದ್ದು ಈ ಹಿನ್ನಲೆಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮುಖ್ಯಮಂತ್ರಿ ಜೊತೆ ಮಾತನಾಡಿ ಮೃತ ಮೂವರಿಗೆ ಒಟ್ಟು 15 ಲಕ್ಷ ಪರಿಹಾರದ ವ್ಯವಸ್ಥೆ ಮಾಡಿದ್ದಾರೆ.


ಯು. ಟಿ ಖಾದರ್ ನಿನ್ನೆಯೇ ಮಂಜನಾಡಿ ಕಲ್ಕಟ್ಟದಲ್ಲಿರುವ ಘಟನೆ ನಡೆದ ಮನೆಯಲ್ಲಿಯೇ ವಿವಿಧ ಇಲಾಖೆಯ ಹಾಗೂ ಗ್ಯಾಸ್ ಕಂಪೆನಿಯ ಅಧಿಕಾರಿಗಳ ಸಭೆಯನ್ನು ನಡೆಸಿ ನಿಯಮಗಳ ಜೊತೆಗೆ ಮಾನವೀಯತೆ ಆಧಾರದ ಮೇಲೆ ವರದಿ ಕಳುಹಿಸಬೇಕೆಂದು ಗ್ಯಾಸ್ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಲಭ್ಯ ಮಾಹಿತಿಯ ಪ್ರಕಾರ ಗ್ಯಾಸ್ ಕಂಪೆನಿ 20 ಲಕ್ಷ ಪರಿಹಾರ ಕೊಡುವ ವ್ಯವಸ್ಥೆಯನ್ನು ಮಾಡಿದ್ದು ಹೀಗಾಗಿ ಒಟ್ಟು 35 ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ಸಿಗಲಿದೆ ಎನ್ನಲಾಗಿದೆ.
ಸ್ಥಳೀಯ
ಶಾಸಕರೂ ಆಗಿರುವ ಸ್ಪೀಕರ್ ಅವರ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಳ್ಳಾಲ ಉಪ ವಿಭಾಗಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ, ಪೊಲೀಸ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತ ಕಡತಗಳನ್ನು ಅಂತಿಮ ಗೊಳಿಸುತ್ತಿದ್ದು ಜಿಲ್ಲಾಧಿಕಾರಿಗಳು ಅಂತಿಮ ವರದಿ ಸಲ್ಲಿಸುತ್ತಿದ್ದಂತೆಯೇ ಪರಿಹಾರದ ಹಣ ಕುಟುಂಬಕ್ಕೆ ಸಿಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು