2:52 PM Saturday4 - January 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ… ಕ್ರೆಡಲ್ ನಿಂದ 40.53 ಕೋಟಿ ಲಾಭಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಸ್ತಾಂತರ ಬೆಂಗಳೂರು: ಬೈಕ್ ಶೋ ರೂಂನಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ 60ಕ್ಕೂ ಹೆಚ್ಚು… ಮುಂದಿನ ವರ್ಷ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ… ಎಚ್.ಡಿ.ಕೋಟೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಪಂಜಿಮೊಗರು ಇಹ್ಸಾನ್ ವೆಲ್ಫೆಲ್ ಟ್ರಸ್ಟ್ ನಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

29/12/2024, 21:47

ಮಂಗಳೂರು(reporterkarnataka.com): ಪಂಜಿಮೊಗರು ಇಹ್ಸಾನ್ ವೆಲ್ಫೆಲ್ ಟ್ರಸ್ಟ್ ಇದರ ಸುಕೂನ್ ಯೋಜನೆಯಡಿಯಲ್ಲಿ ನಿರ್ಮಿಸಿ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಸಾಬಿತ್‌ ಸಖಾಫಿ ತಂಙಳ್ ನೂತನ ಮನೆಯನ್ನು ಹಸ್ತಾಂತರಿಸಿದರು.
ಮಂಗಳೂರು ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಲವು ಸಂಘ ಸಂಸ್ಥೆಗಳು ಬಡವರಿಗೆ ಒಂದು ಕೊಠಡಿಯ ಮನೆ ನಿರ್ಮಿಸಿಕೊಡುವಂತದ್ದು ನಾವು ನೋಡಿದ್ದೇವೆ. ಅದರೆ ಇಹ್ಸಾನ್ ಟ್ರಸ್ಟ್ ಎರಡು ವಿಶಾಲವಾದ ಕೊಠಡಿಯ ಸುಸಜ್ಜಿತವಾದ ಉತ್ತಮ ಗುಣಮಟ್ಟದ ಮನೆ ನಿರ್ಮಿಸಿ ಕೊಡುವ ಮೂಲಕ ಇದರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಈ ಮನೆಯವರು ಪ್ರತಿ ದಿನ ಇಹ್ಸಾನ್ ತಂಡದ ಸದಸ್ಯರಿಗೆ ಪ್ರಾರ್ಥಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಕಾವೂರು ಪೊಲೀಸ್ ಠಾಣಾ ಪೋಲಿಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು‌ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಮಾತನಾಡಿ ಬಡವರಿಗೆ ಮದುವೆ ಮಾಡುವುದು ಮನೆ ನಿರ್ಮಿಸುದು ಶೈಕ್ಷಣಿಕ ಹಿಂದುಳಿದವರಿಗೆ ಸಹಾಯ ಮಾಡುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಈ ಮೂರು‌ ಕಾರ್ಯದಲ್ಲಿ ಇಹ್ಸಾನ್ ಟ್ರಸ್ಟ್ ಸಕ್ರಿಯವಾಗಿದೆ. ಅಪರಾಧ ತಡೆ ಮಾಸಾಚರಣೆಯನ್ನು ಕಾವೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಯೋಸಿದ್ದು ಕಳೆದ ಒಂದು ವರ್ಷಗಳಿಂದ ಸುಮಾರು 113 ಕೇಸ್ ಗಳನ್ನು ದಾಖಲಿಸಿದ್ದೇವೆ. ಈ ಭಾಗದ ಜನರು ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾಗದಂತೆ ಜಾಗೃತರಾಗಬೇಕು ಎಂದು ಹೇಳಿದರು.
ಇಹ್ಸಾನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ನಿಸಾರ್ ಕೆ.ಎಂ‌. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ತೈಬಾ ಆಕಾಡೆಮಿ ಮ್ಯಾನೇಜರ್ ಬಶೀರ್‌ ಮದನಿ ಅಲ್-ಕಾಮಿಲ್ , ಕೂಳೂರು ಮುಹೀಯುದ್ದೀನ್ ಜುಮಾ‌ ಮಸೀದಿ ಅಧ್ಯಕ್ಷ ಕೆ.ಅಬ್ಬಾಸ್ ಹಾಜಿ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಸಿಪಿಎಂ ಮುಖಂಡ ದಯಾನಂದ ಶೆಟ್ಟಿ, ಕೂಳೂರು ಕಾವೂರು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹುಸೈನ್ ರಿಯಾಝ್, ಅಲ್-ಫಾರೂಕ್ ಜುಮಾ ಮಸೀದಿ ಅಧ್ಯಕ್ಷ ನೌಷಾದ್ ಅಲಿ, ಇಹ್ಸಾನ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಆಫ್ರಿದ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಜುನೈದ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರೀಕ್ ವಂದಿಸಿದರು. ಸದಸ್ಯ ಶಕೀಲ್ ಕೂಳೂರು ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು