ಇತ್ತೀಚಿನ ಸುದ್ದಿ
ಆಶಿಶ್ ಎಂ. ರಾವ್ ವಾಮಂಜೂರುಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ
25/12/2024, 22:50
ಮಂಗಳೂರು(reporterkarnataka.com): ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕದ ಕಲಾವಿದರು ಸೇವಾ ಟ್ರಸ್ಟ್ ರಿಜಿಸ್ಟರ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕರಾವಳಿ ಕಲೋತ್ಸವ 2024- 25 ಮತ್ತು ಬಹು ಸಂಸ್ಕೃತಿ ಸಂಭ್ರಮದಲ್ಲಿ ಬಹುಮುಖ ಪ್ರತಿಭೆ ಎ. ಜೆ. ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯಾದ ಆಶಿಶ್ ಎಂ. ರಾವ್ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಶಿಶ್ ಅವರ ಕಲಾ ಪ್ರತಿಭೆಯನ್ನು ಗುರುತಿಸಿ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ಡಿಸೆಂಬರ್ 20 ರಂದು ಬಂಟ್ವಾಳ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಸ್ಥಾಪಕರು ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ, ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ಗೌರವಾಧ್ಯಕ್ಷ
ಜಗನ್ನಾಥ ಚೌಟ ವಿ.,ಜಯರಾಮ್ ರೈ, ಫೌಜಿಯ, ಜ್ಯೋತಿಷಿ ಅನಿಲ್ ಪಂಡಿತ್,ಜಿಲ್ಲಾ ಮದರಸ ವ್ಯವಸ್ಥಾಪಕ ಕೆ.ಪಿ. ಉಮರ್ ರ್ಮುಸ್ಲಿಯಾರ್ ಪಾಂಡವರ ಕಲ್ಲು ಹಾಗೂ ಚಿಣ್ಣರ ಅಧ್ಯಕ್ಷರಾದ ದೀಯಾ ರಾವ್ ಉಪಸ್ಥಿತರಿದ್ದರು.