ಇತ್ತೀಚಿನ ಸುದ್ದಿ
ನಂಜನಗೂಡು: ಕಪಿಲಾರತಿ ಪ್ರಯುಕ್ತ ಹೋಮ, ಹವನ ಹಾಗೂ ವಿಶೇಷ ಪೂಜೆ
14/12/2024, 20:08
ಮೋಹನ್ ನಂಜನಗೂಡು ಮೈಸೂರು
info.reporter Karnataka@gmail.com
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಪಿಲಾರತಿ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನದಿಯ ಮಧ್ಯ ಭಾಗದಲ್ಲಿರುವ 16 ಕಾಲು ಮಂಟಪದಲ್ಲಿ ಸ್ಥಳ ಪುರೋಹಿತರಾದ ಶ್ರೀ ಕೃಷ್ಣ ಜೋಯಿಸ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಲೋಕಕಲ್ಯಾಣಕ್ಕಾಗಿ ಬೆಳಿಗ್ಗೆಯಿಂದಲೇ ಹೋಮ ಹವನ ನೆರವೇರಿಸಿ ಮಂಟಪದಲ್ಲಿ ಶ್ರೀಕಂಠೇಶ್ವರ ಸ್ವಾಮಿಯವರ ಲಿಂಗ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಜಾತಿ ಮತ ಭೇದವಿಲ್ಲದೆ ಎಲ್ಲಾ ಸಾರ್ವಜನಿಕ ಭಕ್ತರಿಂದ ಅಭಿಷೇಕವನ್ನು ಮಾಡಿಸಲಾಯಿತು. ಪಟ್ಟಣದ ವಿವಿಧಡೆಯಿಂದ ಬಂದ ನೂರಾರು ಭಕ್ತರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು. ನಂತರ ಶಿವನ ರೂಪದಲ್ಲಿ ಅಲಂಕೃತಗೊಂಡ ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜಾ ಕಾರ್ಯವನ್ನು ನೆರವೇರಿಸಿದ ಬಳಿಕ ಕೃಷ್ಣ ಜೋಯಿಸ್ ಹಾಗೂ ಯುವ ಬ್ರಿಗೇಡ್ ಮುಖಂಡ ಚಂದ್ರಶೇಖರ್ ಮಾತನಾಡಿ ಕಪಿಲಾರತಿ ಹಾಗೂ ಹದಿನಾರು ಕಾಲು ಮಂಟಪದ ವಿಶೇಷತೆ ಬಗ್ಗೆ ತಿಳಿಸಿದರು.