ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಸ್ಪೀಕರ್ ಆಗಿ ಕಲಾಪ ನಡೆಸಿಕೊಟ್ಟ ಶಾಸಕ ಮಂಜುನಾಥ ಭಂಡಾರಿ
13/12/2024, 10:22
ಬೆಳಗಾವಿ( reporterkarnataka.com): ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ 154ನೇ ಚಳಿಗಾಲದ ಅಧಿವೇಶನದ 4ನೇ ದಿನವಾದ ಗುರುವಾರ ವಿಧಾನ ಪರಿಷತ್ ಸದನದಲ್ಲಿ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಯಶಸ್ವಿ ಕಲಾಪ ನಡೆಸಿಕೊಟ್ಟರು.
ಈ ವರ್ಷದ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವಾದ ಗುರುವಾರದಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನದಲ್ಲಿ ಕೂತು ಮಂಜುನಾಥ ಭಂಡಾರಿ ಅವರು ಕಲಾಪವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಾನು ಶಾಸಕ ಮಾತ್ರವಲ್ಲದೇ ಸಭಾಪತಿಗಳಾಗಿಯೂ ಕಾರ್ಯನಿರ್ವಹಿಸ ಬಲ್ಲೆ ಎಂದು ತೋರಿಸಿಕೊಟ್ಟರು.