11:13 PM Wednesday1 - January 2025
ಬ್ರೇಕಿಂಗ್ ನ್ಯೂಸ್
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ… ಎಚ್.ಡಿ.ಕೋಟೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ ಸೋಲಾರ್ ಅಳವಡಿಸಿದರೆ ಕೇಂದ್ರದಿಂದ ಸಬ್ಸಿಡಿ: ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್… ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇ. 18ರಷ್ಟು ಜಿಎಸ್ ಟಿ ರದ್ದತಿ ಕೋರಿ ಶೀಘ್ರವೇ… ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ; ಡ್ರೋನ್ ಬಳಕೆ: ಸಚಿವ ಈಶ್ವರ… ಸಹಜ ಹೆರಿಗೆಗೆ ಆದ್ಯತೆ ನೀಡಿ: ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ: ನಕ್ಸಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ಬೈಕಿನ ಹಿಂದೆ ನಿಂತು ಜ್ವಾಲಿ ರೈಡ್ ಮಾಡಿದ ಮಲೆನಾಡಿನ ಶ್ವಾನ: ವೀಡಿಯೋ ವೈರಲ್ ಸಾಹಿತ್ಯ ಅನುವಾದ ಸೇತುವೆ ಕಟ್ಟುವ ಕೆಲಸದಂತೆ: ಚಿಂತಕ ರಹಮತ್ ತರೀಕೆರೆ ಪ್ರತಿಪಾದನೆ ಕೆಪಿಎಸ್ ಸಿ ಮರುಪರೀಕ್ಷೆಯಲ್ಲೂ ಎಡವಟ್ಟು: ಕಾಂಗ್ರೆಸ್ ಸರಕಾರ ವಿರುದ್ದ ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ

06/12/2024, 23:50

ಮಂಗಳೂರು(reporterkarnata.com):- 2024-25ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಯಡಿಯಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಕ್ರೀಡಾಪಟುಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿರಬೇಕು. ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಪ್ರೋತ್ಸಾಹಧನವನ್ನು ಕರ್ನಾಟಕದ ಕ್ರೀಡಾಪಟುಗಳಿಗೆ ಮಾತ್ರ ನೀಡಲಾಗುತ್ತದೆ. ಕ್ರೀಡಾಪಟುಗಳು ಕರ್ನಾಟಕ ಮೂಲದವರಾಗಿದ್ದು, ಬೇರೆ ರಾಜ್ಯ ಅಥವಾ ಕ್ರೀಡಾತಂಡವನ್ನುವಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ. 6ನೇ ತರಗತಿಯಿಂದ ವ್ಯಾಸಂಗಮಾಡುತ್ತಿರುವ ಕ್ರೀಡಾಪಟುಗಳು ಹಾಗೂ ಸರ್ಕಾರಿ/ಅರೆ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವವರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದವರು ಮಾತ್ರ ಅರ್ಜಿ ಸಲ್ಲಿಸ ಬಹುದು.
ಕ್ರೀಡಾಪಟುಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಆರ್.ಡಿ. ಸಂಖ್ಯೆಯನ್ನು ಒಳಗೊಂಡ ಜಾತಿ/ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಒಲಂಪಿಕ್/ಏಷ್ಯನ್/ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯದಿಂದ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ ಶಿಪ್ ಗಳಿಗೆ ಮಾತ್ರ ಪೆÇ್ರೀತ್ಸಾಹಧನ ನೀಡಲಾಗುವುದು. ರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಪ್ರೋತ್ಸಾಹ
ಧನಕ್ಕೆ ಅರ್ಹರಾಗಿರುವುದಿಲ್ಲ.
ಬ್ಯಾಂಕ್ ಖಾತೆ ಕಡ್ಡಾಯವಾಗಿ ಕ್ರೀಡಾಪಟುವಿನ ಹೆಸರಿನಲ್ಲಿದ್ದು, ಪಾಸ್ ಪುಸ್ತಕದ ಮುಖಪುಟ ಪ್ರತಿಯನ್ನು (ಹೆಸರು. ಖಾತೆ ಸಂಖ್ಯೆ, IಈSಅ) ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನ.
ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇವರ ಕಚೇರಿಯಲ್ಲಿ ಮಂಗಳಾ ಕ್ರೀಡಾಂಗಣ ಕಚೇರಿಗೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು