ಇತ್ತೀಚಿನ ಸುದ್ದಿ
ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ ಆಗ್ರಹ
02/12/2024, 12:31
ಮಂಗಳೂರು(reporterkarnataka.com):ರಾಜ್ಯ ಸರಕಾರದ ಆದೇಶ ಪಾಲನೆ ಮಾಡದ, ಬಿಜೆಪಿ ಮತ್ತು ಸಂಘ ಪರಿವಾರದ ಕೈ ಗೊಂಬೆ ರೀತಿ ವರ್ತಿಸುತ್ತಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಎಡಪಂಥೀಯ ನಾಯಕ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಪೊಲೀಸ್ ಕಮಿಷನರ್ ಜನಪರ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಅವರ ವರ್ಗಾವಣೆಗೆ ಆಗ್ರಹಿಸಿ ನಗರದ ಮಿನಿ ವಿಧಾನ ಸೌಧ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರ್ವಾಧಿಕಾರಿ ಧೋರಣೆಯ ಹಳೆ ಕಾಲದ ಬ್ರಿಟಿಷ್ ಮಾದರಿ ಪೊಲೀಸ್ ಕಮಿಷನರ್ ನಮಗೆ ಬೇಕಾಗಿಲ್ಲ. ಕಮಿಷನರ್ ಅಗರ್ ವಾಲ್ ಅವರು ಸಂಘನಿಕತನದ ಆದೇಶಗಳನ್ನು ಮಾತ್ರ
ಗಮನಕ್ಕೆ ತೆಗೆದುಕೊಳ್ಳುತ್ತಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.