7:38 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ವಾಗ್ದೇವಿ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆ: ಪ್ರತಿಭಾ ಪುರಸ್ಕಾರ, ಕಾಲೇಜು ವಿದ್ಯಾರ್ಥಿಗಳ ಸಂವಾದ

29/11/2024, 21:26

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com
ಚಿಕ್ಕದಾಗಿ ಹುಟ್ಟಿಕೊಂಡ ಸಂಸ್ಥೆ ಈಗ ಬೆಳ್ಳಿ ಸಂಭ್ರಮದತ್ತ ಬೆಳೆದು ನಿಂತಿದೆ. ವಾಗ್ದೇವಿ ಶಿಕ್ಷಣ ಸಂಸ್ಥೆಯನ್ನು 1999-2000 ದಲ್ಲಿ ಸ್ಥಾಪನೆ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಎಸ್ ಎಸ್ ಎಲ್ ಸಿಯಲ್ಲಿ ಇಲ್ಲಿಯವರೆಗೆ 35 ರಾಜ್ಯ ಮಟ್ಟದ ರ‌್ಯಾಂಕ್, ಕಾಲೇಜಿನಲ್ಲಿ 16 ರ‌್ಯಾಂಕ್ ಕೊಟ್ಟಿದ್ದೇವೆ ಎಂದು ಸತ್ಪತ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ತಿಳಿಸಿದರು.

ಶುಕ್ರವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಬೆಳ್ಳಿ ಸಂಭ್ರಮದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆ ಮತ್ತು ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಮನೋರಂಜನೆ ಕಲೆ, ಕ್ರೀಡೆ ಎಷ್ಟು ಮುಖ್ಯವೋ ಮಕ್ಕಳು ನಮ್ಮಲ್ಲಿ ಇರುವ ಸಂವಿಧಾನದ ಪ್ರಮುಖ ಭಾಗವಾಗಿರುವ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಇವೆಲ್ಲವೂ ಬೇಕು. ಇದರ ಜೊತೆಗೆ ಪತ್ರಿಕಾರಂಗದ ಬಗ್ಗೆ ಸಹ ಮಕ್ಕಳಿಗೆ ತಿಳಿಯಬೇಕು. ಈಗಾಗಲೇ
ಕಾನೂನಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಇವತ್ತು ಪತ್ರಿಕಾರಂಗದ ಬಗ್ಗೆ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂವಾದ ನಡೆಸುತ್ತಿದ್ದೇವೆ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಮಾತನಾಡಿ, ವಾಗ್ದೇವಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಜಗದೀಶ್ ಅವರನ್ನು ತುಂಗಾ ಕಾಲೇಜು ಶಿಕ್ಷಕರಾಗಿರುವಾಗಿನಿಂದ ನೋಡುತ್ತಿದ್ದೇವೆ. ಅವರನ್ನು ಅತ್ಯಂತ ಕ್ರಿಯಾಶೀಲ ಶಿಕ್ಷಕ ಎಂದರೆ ತಪ್ಪಾಗಲಾರದು. ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಕಳುಹಿಸುತ್ತೇವೆ ಆದರೆ ಅಲ್ಲಿನ ಶಿಕ್ಷಣವನ್ನು ಇಲ್ಲಿಯೇ ನೀಡಬೇಕು ಎಂದು ಭಾವಿಸಿ ಇಲ್ಲಿಯವರೆಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆ ವಾಗ್ದೇವಿ ಎಂದು ಹೇಳಿದರು.
ಶಿಕ್ಷಣ ಮಾತ್ರವಲ್ಲದೆ ಬೇರೆ ಬೇರೆ ವಿಭಾಗದಲ್ಲಿ ಸಹ ಮಕ್ಕಳು ಮುಂದಿರುತ್ತಾರೆ. ಅಂತಹ ಕಲೆಯನ್ನು ಹೊರ ತರುವ ಕೆಲಸ ಶಿಕ್ಷಕರು ಮಾಡಬೇಕು. ದೇಶವನ್ನು ಮುನ್ನಡೆಸಲು ರ‌್ಯಾಂಕ್ ಮಾತ್ರ ಇದ್ದರೆ ಆಗುತ್ತದೆ ಎಂದು ಭಾವಿಸುವುದಕ್ಕಿಂತ ಕಲೆ ಕ್ರೀಡೆ ಯಾವುದರಲ್ಲಿ ಆದರೂ ಮಕ್ಕಳು ದೇಶದ ಗಮನ ಸೆಳೆಯಬಹುದು ಎಂದರು.
ಕ್ರೀಡೆ, ರಸಪ್ರಶ್ನೆ, ಕರಾಟೆ ಸೇರಿ ಹಲವು ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಕಳೆದ ಬಾರಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ರ‌್ಯಾಂಕ್ ಪಡೆದ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಶಾಲೆಯಲ್ಲಿ ಕೆಲಸ ನಿರ್ವಹಿಸಿದ್ದ ಶಿಕ್ಷಕರಿಗೆ ಗೌರವ ಪುರಸ್ಕಾರ ನೀಡಲಾಯಿತು.
ನಂತರ ಕಾಲೇಜು ವಿದ್ಯಾರ್ಥಿಗಳು ಹಾಗೂ ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಹರಿ ಜೋಯ್ಸ್, ಪ್ರಾರ್ಥನೆಯನ್ನು ನಿಧಿ ಸುರೇಶ್, ಸ್ವಾಗತ ಭಾಷಣವನ್ನು ಧೃತಿ ಎಂ ಆರ್ ಮಾಡಿದರು.
ಸಭೆಯಲ್ಲಿ ಸತ್ಪತ ಟ್ರಸ್ಟ್ ಸದಸ್ಯರಾದ ಧರ್ಮೇಶ್, ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಮುನ್ನೂರು, ತುಂಗಾ ಕಾಲೇಜು ಮುಖ್ಯಸ್ಥರಾಗಿದ್ದ ಪ್ರಕಾಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು