11:41 PM Thursday28 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಕೇಂದ್ರ ಮತ್ತು ರಾಜ್ಯ ಸರಕಾರ ಬಡವರ, ರೈತ- ಕೃಷಿ ಕಾರ್ಮಿಕ ವಿರೋಧಿ: ಜಿ.ಸಿ.ಬಯ್ಯಾ ರೆಡ್ಡಿ ಆರೋಪ

28/11/2024, 22:44

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೇಂದ್ರ ಮತ್ತು ರಾಜ್ಯ ಸರಕಾರ ಬಡವರ, ರೈತ ಕೃಷಿ ಕಾರ್ಮಿಕ ವಿರೋಧಿ ಸರಕಾರವಾಗಿದೆ. ಇದರಿಂದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ಬಹುರಾಷ್ಟ್ರೀಯ, ದೇಶಿಯ ಬಂಡವಾಳ ಶಾಹಿಗಳಿಂದ ಕೃಷಿ ನಾಶವಾಗುತ್ತಿದೆ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ
ಜಿ.ಸಿ.ಬಯ್ಯಾ ರೆಡ್ಡಿ ಆರೋಪಿಸಿದರು.
ಪಟ್ಟಣದ ಪುರಸಭೆ ಮುಂಭಾಗದ ಎಂ.ಜಿ. ರಸ್ತೆಯಲ್ಲಿ ಸಿಪಿಎಂ ಪಕ್ಷದಿಂದ ಏರ್ಪಡಿಸಿದ್ದ 15ನೇ ಸಮ್ಮೇಳನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ರಾಜ್ಯ ಸರಕಾರಗಳು ಬಡವರು, ರೈತರನ್ನು ಕಡೆಗಣಿಸಿ ಕಾರ್ಪೂರೇಟ್ ಬಂಡವಾಳಗಾರರ ಪರ ನಿಂತಿವೆ ಎಂದು ಅವರು ಆಪಾದಿಸಿದರು.
ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ಪ್ರಜಾಪ್ರಭುತ್ವಕ್ಕೆ ಕಂಠಕವಾಗಿವೆ. ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದೆ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪಿಸಿ ರೈತರ ಭೂಮಿ ಕಸಿದುಕೊಳ್ಳುತ್ತಿದ್ದಾರೆ. ಸರಕಾರದ ರೈತ ವಿರೋದಿ ನೀತಿಗಳಿಂದ ಉಳುವವನೆ ಭೂಮಿ ಒಡೆಯ ರೈತ ಎನ್ನುವುದು ಆಗುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಪ್ರವೇಟ್ ಲಿಮಿಟೆಡ್ ಪಕ್ಷಗಳಾಗಿವೆ. ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ನಾವು ಸಮ್ಮೇಳನದಲ್ಲಿ ದಲಿತರು, ಬಡವರ, ರೈತರ ಬಗ್ಗೆ ಚರ್ಚಿಸುತ್ತೇವೆ. ರಾಷ್ಟ್ರೀಯ ಪಕ್ಷಗಳು ಇಂದು ಕುಟುಂಬ ಪಕ್ಷಗಳಾಗಿವೆ ಎಂದು ಆರೋಪಿಸಿದರು.


ಕೆಪಿಆರೆಸ್ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ ಬಂದು ೭೭ ವರ್ಷ ಕಳೆದರೂ ಭೂಮಿ ಸಮಸ್ಯೆ ಪರಿಹಾರವಾಗಿಲ್ಲ. ರೈತ ವಿರೋದಿ ನೀತಿಗಳಿಂದ ಜನ ನಲುಗುತ್ತಿದ್ದಾರೆ. ಕೃಷಿ ಪ್ರಧಾನ ಕೋಲಾರ ಜಿಲ್ಲೆ ಈಗ ಕೈಗಾರಿಕಾ ಪ್ರದೇಶವಾಗಿ ರೈತರಲ್ಲಿ ಇರಬೇಕಾದ ಭೂಮಿ ಬಂಡವಲಗಾರರ ಕೈಸೇರುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ಕಿತ್ತುಕೊಳ್ಳುವ ಪರಿಸ್ಥಿತಿ ಬಂದಿದೆ. ಕೃಷಿ ಕೈ ಹಿಡಿಯುವ ಕೈಗಾರಿಕೆಗಳು ತೆರೆಯಬೇಕು. ಈಗಿರುವ ಕಂಪನಿಗಳಲ್ಲಿ ಕನಿಷ್ಟ ವೇತನ ೩೫ ಸಾವಿರ ಕೊಡದೆ ಕೇವಲ ೧೮ ಸಾವಿರ ಸಂಬಳ ಕೊಟ್ಟು ವಂಚಿಸಲಾಗುತ್ತಿದೆ. ತಾಲ್ಲೂಕಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಮಾವು ತಿರುಳು ತೆಗೆಯುವ ಪಲ್ಪ್ ಕಾರ್ಖಾನೆಗೆ ಪ್ರಥಮ ಆದ್ಯತೆ ಕೊಟ್ಟು ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಹಾಲಿಗೆ ಪ್ರೋತ್ಸಾಹಧನ ಲೀಟರ್‌ಗೆ ೧೦ ಕೊಟ್ಟು ಲೀಟರ್ ಹಾಲಿನ ಬೆಲೆ ೫೦ ರೂ. ಕೊಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕೃಷಿ ಮಾಡುವ ಭೂಮಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಅವರನ್ನು ಬೀದಿಗೆ ತಳ್ಳಿದ್ದಾರೆ. ಬಡವರಿಗೆ ನೆರವಾಗುವಂತೆ ಜನಸಾಮಾನ್ಯ ಆರೋಗ್ಯ ರಕ್ಷಣೆಗೆ ತಾಲ್ಲೂಕಿಗೊಂದು ಉನ್ನತ ಮಟ್ಟದ ಆಸ್ಪತ್ರೆಗಗಳು ತೆರೆದು ಬಡವರಿಗೆ ನೆರವಾಗಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಜನ ವಿರೋಧಿ ಆರ್ಥಿಕ ನೀತಿ ಕೈ ಬಿಟ್ಟು, ಕಾರ್ಮಿಕರಿಗೆ ಕನಿಷ್ಟ ವೇತನ ೩೬ ಸಾವಿರ ಜಾರಿ ಮಾಡಿ. ಸರಕಾರ ಬಡವರ ರೈತರನ್ನು ಕಾಯುವ ಕೆಲಸ ಮಾಡಿ. ದುಡಿಯುವವರ ಮೇಲೆ ಕಳಜಿ ಇಲ್ಲದೆ ಅರಣ್ಯ ಭೂಮಿ ನೆಪದಲ್ಲಿ ರೈತರ ಭೂಮಿ ಕಿತ್ತುಕೊಳ್ಳುತ್ತಿರುವುದು ಸರಕಾರಕ್ಕೆ ಪಾಪವಾಗಿ ತಟ್ಟುತ್ತದೆ ಎಂದು ಕಿಡಿಕಾರಿದರು.
ಮಾಬೆಸಂ ಜಿಲ್ಲಾಧ್ಯಕ್ಷ ಚಿನ್ನಪ್ಪ ರೆಡ್ಡಿ, ಟಿ.ಎಂ. ವೆಂಟಕೇಶ್, ಮುನಿವೆಂಕಟಪ್ಪ, ಆರ್.ವೆಂಕಟೇಶ್, ಪಿ.ಶ್ರೀನಿವಾಸ್ ಹಾಜರಿದ್ದರು. ಜಿಲ್ಲಾ ಸಮಿತಿ ಸದಸ್ಯ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎನ್.ಈರಪ್ಪ ರೆಡ್ಡಿ ವಂದಿಸಿದರು.

೨೩ ಶ್ರೀನಿವಾಸಪುರ ೧: ಸಿಪಿಐಎಂ ಪಕ್ಷದ ೧೮ನೇ ಸಮ್ಮೇಳನ ರಾಜ್ಯ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಉದ್ಘಾಟಿಸಿ ಮಾತನಾಡಿದರು. ೨೩ ಶ್ರೀನಿವಾಸಪುರ ೨: ಸರಕಾರಗಳ ಜನ ವಿರೋದಿ ನೀತಿ ಖಂಡಿಸಿ ಎಂಜಿ ರಸ್ತೆಯಲ್ಲಿ ಸಿಪಿಎಂ ಮುಖಂಡರು ಪ್ರತಿಭಟನೆೆ ಮಾಡಿದರು. ೨೩ ಶ್ರೀನಿವಾಸಪುರ ೩: ಸಿಪಿಐಎಂ ೧೮ನೇ ಸಮ್ಮೇಳನ ಅಂಗವಾಗಿ ಜಾನುಪದ ಕಲಾವಿದರು ಕೋಲಾಟ ಹಾಡಿದರು. ೨೩ ಶ್ರೀನಿವಾಸಪುರ ೪: ಸಿಪಿಐಎಂ ೧೮ನೇ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖಂಡರು.

ಇತ್ತೀಚಿನ ಸುದ್ದಿ

ಜಾಹೀರಾತು