3:53 PM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಸಮಾಜ ಬಲಿಷ್ಠಗೊಳ್ಳಲು ಸಮಾಜದ ಬಗ್ಗೆೆ ಚಿಂತನೆ ಮಾಡುವವರು ಬೇಕು: ಐಕಳ ಹರೀಶ್ ಶೆಟ್ಟಿ

25/11/2024, 14:42

ಮುಂಬಯಿ(reporterkarnataka.com): ದೇಶ- ವಿದೇಶಗಳಲ್ಲಿರುವ ಕುಲಾಲ ಸಮಾಜದ ಬಂಧುಗಳು ಎಲ್ಲಾ ಕ್ಷೇತ್ರಗಳಲ್ಲೂ ಬಲಾಢ್ಯರಾಗಿದ್ದಾರೆ, ಪತ್ರಕರ್ತರಾಗಿ ಸಂಘಟಕರಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾಾರೆ. ಕುಲಾಲ ಸಮಾಜ ಬಾಂಧವರನ್ನು ಕರೆಸಿ ಸನ್ಮಾಾನಿಸುತ್ತಿರುವುದು ಅಭಿನಂದನೀಯ. ಅದರೊಂದಿಗೆ ಊರಿನ ಸನ್ಮಾಾನಿತರೆಲ್ಲರೂ ಕುಲಾಲ ಸಮಾಜದ ಗಣ್ಯ ವ್ಯಕ್ತಿಗಳು. ಸಮಾಜ ಗಟ್ಟಿಯಾಗಲು ಸಮಾಜದ ಬಗ್ಗೆೆ ಚಿಂತನೆ ಮಾಡುವ ಇಂತಹ ವ್ಯಕ್ತಿಗಳು ಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಮುಂಬಯಿಯ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಮಂಗಳೂರಿನ ಕುಲಾಲ ಪ್ರತಿಷ್ಠಾಾನ ಮುಂಬಯಿಯಲ್ಲಿ ಆಯೋಜಿಸಿರುವ ಕಿನ್ನಿಗೋಳಿಯ ವಿಜಯ ಕಲಾವಿದರ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನದ ಉದ್ಘಾಾಟನಾ ಕಾರ್ಯಕ್ರಮವನ್ನು ಉದ್ಘಾಾಟಿಸಿ ಅವರು ಮಾತನಾಡುತ್ತಿದ್ದರು.
ನಾವು ಹುಟ್ಟಿದ ಊರು, ತಂದೆ, ತಾಯಿ ಮುಖ್ಯವಾಗಿ ನಾವು ಹುಟ್ಟಿದ ಸಮಾಜ ಎಲ್ಲಕ್ಕಿಂತಲೂ ಮಿಗಿಲು , ಅತಿ ಹೆಚ್ಚು ಕುಲಾಲ ಸಮಾಜದ ಕಲಾವಿದರಿರುವ ವಿಜಯ ಕಲಾವಿದರು ಕಿನ್ನಿಗೋಳಿ ತಂಡಕ್ಕೆೆ ಪ್ರೋತ್ಸಾಾಹ ನೀಡುವ ಕಾರ್ಯವನ್ನು ಕುಲಾಲ ಪ್ರತಿಷ್ಠಾಾನ ಮಾಡಿದೆ , ಅದಕ್ಕೆೆ ಕಿನ್ನಿಗೋಳಿ ಗ್ರಾಾಮದ ಮುಂಬೈಯಲ್ಲಿರುವ ಉದ್ಯಮಿಗಳು ಗ್ರಾಾಮಸ್ಥರು ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಿದ್ದಾರೆ ಎನ್ನುತ್ತಾಾ ಸನ್ಮಾಾನಿತರಿಗೆ ಹಾಗೂ ವಿಜಯ ಕಲಾವಿದರು ಕಿನ್ನಿಿಗೋಳಿ ನಾಟಕ ತಂಡಕ್ಕೆೆ ಶುಭ ಕೋರಿದರು.
ಸಂತಾಕ್ರೂಸ್ ಪೂರ್ವದ ಶ್ರೀ ಮಂತ್ರದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಬಂಜನ್ ಮಾತನಾಡುತ್ತಾ ಈ ನಾಟಕವು ಸಮಾಜಕ್ಕೆೆ ಉತ್ತಮ ಸಂದೇಶ ನೀಡುತ್ತಿದೆ. ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ. ಅದೇ ರೀತಿ ನಾಟಕದ ಪ್ರಥಮ ಪ್ರದರ್ಶನಕ್ಕೆೆ ಅವಕಾಶ ನೀಡಿದ ಕುಲಾಲ ಪ್ರತಿಷ್ಠಾನದ ಮಂಗಳೂರು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್, ಕುಲಾಲ ಪ್ರತಿಷ್ಠಾನದ ಮಂಗಳೂರು ಇದರ ಆಡಳಿತಕ್ಕೆೆ ಒಳಪಟ್ಟ ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾವರ ಅವರನ್ನು ಗಣ್ಯರು ಸನ್ಮಾಾನಿಸಿದರು.
ಸನ್ಮಾಾನ ಸ್ವೀಕರಿಸಿ ಮಾತನಾಡಿದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಿಂದ ಸನ್ಮಾಾನ ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಐಕಳ ಹರೀಶ್ ಶೆಟ್ಟಿಯವರು ಎಲ್ಲಾ ಸಮುದಾಯದ ಪ್ರತಿನಿಧಿ ಮಾತ್ರವಲ್ಲದೆ ಸಾಂಸ್ಕೃತಿಕ ರಾಯಬಾರಿ. ಸಮಾಜದ ಬಡವರ ಬಗ್ಗೆೆ ಕಾಳಜಿ ವಹಿಸುತ್ತಿರುವ ದಿನೇಶ್ ಕುಲಾಲ್ ಅವರು ಕುಲಾಲ ಸಮಾಜದ ಆಸ್ತಿ. ಕೇವಲ ಎರಡು ವರ್ಷಗಳಲ್ಲಿ ಶತಮಾನವನ್ನು ಪೂರೈಸಲಿರುವ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ತನ್ನ ನೂರನೇ ವರ್ಷದಲ್ಲಿ ಸಮಾಜದ ಹೆಣ್ಮಕ್ಕಳಿಗೆ ಮಂಗಳೂರಿನ ವೀರನಾರಾಯಣ ದೇವಸ್ಥಾಾನದ ಸಮೀಪ ವಸತಿ ನಿಲಯ ಸ್ಥಾಾಪನೆಯ ಯೋಜನೆಯನ್ನು ಕೈಗೊಂಡಿದೆ ಎಂದರು.
ಶ್ರೀ ದೇವಿ ದೇವಸ್ಥಾಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾಾವರ ಇವರು ಮಾತನಾಡುತ್ತಾಾ ಕುಲಾಲ ಪ್ರತಿಷ್ಠಾಾನಕ್ಕೆೆ ಧನ್ಯವಾದ ಸಮರ್ಪಿಸಿ ವಿಜಯ ಕಲಾವಿದರು ಕಿನ್ನಿಿಗೋಳಿ ತಂಡದ ಈ ವರ್ಷದ ಮುಂಬಯಿ ಪ್ರವಾಸಕ್ಕೆೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾದ ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್- ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, ಟೆಂಡರ್ ್ರೆಶ್ ಐಸ್ಕ್ರೀಂಮ್ ನ ನಿರ್ದೇಶಕಿ ಉಷಾ ವಿ ಶೆಟ್ಟಿ, ಗೋರೆಗಾಂವ್ ಪೂರ್ವದ ನಿತ್ಯಾಾನಂದ ಡೈಸ್ ಟೂಲ್ಸ್ ಆಡಳಿತ ನಿರ್ದೇಶಕ ಶ್ರೀಧರ್ ಮೂಲ್ಯ, ಸಂದೀಪ್ ಶೆಟ್ಟಿ ಮತ್ತು ತಂಡ ಮುಂಬೈ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಉಪಸ್ಥಿತರಿದ್ದರು.
ನರೇಂದ್ರ ಕೆರೆಕಾಡು ಮತ್ತು ಶರದ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಅತಿಥಿ ಗಣ್ಯರನ್ನು ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ ವೈ ಮೂಲ್ಯ, ಕುಲಾಲ ಪ್ರತಿಷ್ಠಾಾನದ ಮಂಗಳೂರು ಇದರ ಮುಂಬಯಿ ಸಂಘಟಿಕರಾದ, ದಿನೇಶ್ ಕುಲಾಲ್, ಉಮೇಶ್ ಬಂಗೇರ, ಯೋಗೀಶ್ ಬಂಗೇರ, ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ವೈ ಬಂಗೇರ ಗೌರವಿಸಿದರು.
ಮುಂಬಯಿಯವರು ಕಲೆ,ಕಲಾವಿದರಿಗೆ ಪ್ರೋತ್ಸಾಹ ನೀಡುವವರು: ರತ್ನಾಾಕರ್ ಶೆಟ್ಟಿ ಮುಂಡ್ಕೂರು
ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆೆ ಕಾರ್ಯಾಧ್ಯಕ್ಷ ರತ್ನಾಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾಾ ಕಿನ್ನಿಗೋಳಿ ತಂಡ ಮುಂಬೈ ನಗರಕ್ಕೆೆ ನಿರಂತರ ಬರಬೇಕೆನ್ನುವ ನನ್ನ ಮತ್ತು ಊರಿನವರ ಎಲ್ಲರ ಆಶಯವಾಗಿದೆ, ಅದಕ್ಕೆೆ ಪೂರಕವಾಗಿ ಎಲ್ಲರೂ ಪ್ರೋತ್ಸಾಹವನ್ನು ನೀಡುತ್ತಾಾ ಬಂದಿದ್ದಾರೆ. ಇಲ್ಲಿ ನಾವೆಲ್ಲರೂ ಬಾಂಧವ್ಯದ ಮೂಲಕ ಒಟ್ಟಾಾಗಿದ್ದೇವೆ. ಶರತ್ ಶೆಟ್ಟಿ ಹಾಗೂ ದಿನೇಶ್ ಕುಲಾಲ್ ಇವರದ್ದು ಪತ್ರಕರ್ತರಾಗಿ ಬಾಂಧವ್ಯ. ಕಳೆದ 30-35 ವರ್ಷಗಳಿಂದ ಪ್ರಕಾಶ್ ಶೆಟ್ಟಿ ಸುರತ್ಕಲ್ ಊರಿನ ಕಲಾವಿದರನ್ನು ಮುಂಬಯಿಗೆ ತರಿಸಿ ಪ್ರೋೋತ್ಸಾಾಹಿಸುತ್ತಿದ್ದು ಅಂತಹ ಕಾರ್ಯಕ್ರಮಕ್ಕೆೆ ಸಹಕರಿಸಲು ಸಂತೋಷವಾಗುತ್ತಿದೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ಅವರ ಆಶ್ರಯದಲ್ಲಿ ಡಿ 7 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ವಿಶ್ವ ಬಂಟರ ಸಮಾಗಮ-2024ರ ಕಾರ್ಯಕ್ರಮದ ನಡೆಯಲಿದೆ ಎಂದರು.
ನೆರವು: ನಾಟಕ ತಂಡದಲ್ಲಿ ಕುಲಾಲ ಸಮಾಜದ ಏಳು ಮಂದಿ ಕಲಾವಿದರು ಅಭಿನಯಿಸುತ್ತಿದ್ದು, ನಾಟಕದ ಕಲಾವಿದೆ ಕಾನೂನು ವಿದ್ಯಾಾರ್ಥಿನಿಯಾಗಿರುವ ಕೃತಿಕಾ ಕುಲಾಲ್ ಉಲ್ಲಂಜೆ ಅವರಿಗೆ ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆೆ ಕಾರ್ಯಾಧ್ಯಕ್ಷ ರತ್ನಾಾಕರ್ ಶೆಟ್ಟಿಿ ಮುಂಡ್ಕೂರು ಅವರು ಐಕಳ ಹರೀಶ್ ಶೆಟ್ಟಿ ಯವರ ಉಪಸ್ಥಿಿತಿಯಲ್ಲಿ ಶಿಕ್ಷಣಕ್ಕೆೆ ಸಹಾಯಧನವನ್ನು ಹಸ್ತಾಂತರಿಸಿದರು.
ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯಾ ಕಲಾವಿದರು ಅಭಿನಯಿಸಿದ, ಹರೀಶ್ ಪಡುಬಿದ್ರಿಯವರ ರಚನೆಯ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದ ಈ ಬಾರಿಯ ಅಮ್ಮು ಆಮುಂಡರಾ ತುಳು ನಾಟಕ ಪ್ರದರ್ಶನ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು