ಇತ್ತೀಚಿನ ಸುದ್ದಿ
ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದ ಮೆರವಣಿಗೆ: ಪೂರ್ವಭಾವಿ ಸಭೆ
19/11/2024, 18:44

ಮಂಗಳೂರು(reporterkarnataka.com): ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ 2025 ಜನವರಿ 5ರಂದು ನಡೆಯಲಿದ್ದು, ಇದರ ಬಗ್ಗೆ ಪೂರ್ವಬಾವಿ ಸಭೆಯನ್ನು ಬಿಷಪ್ ಹೌಸ್‌ನಲ್ಲಿ ನಡೆಸಲಾಯಿತು.
ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ ವಹಿಸಿ, ಕಾರ್ಯಕ್ರಮದ ಬಗ್ಗೆ ರೂಪುರೇಖೆಯನ್ನು ವಿವರಿಸಿದರು. ಈ ಸಭೆಯಲ್ಲಿ ಧರ್ಮಪ್ರಾತ್ಯದ ಶ್ರೇಷ್ಠ ಗುರು ವಂ| ಪಾ| ಮ್ಯಾಕ್ಸಿಂ ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೋ, ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.
ರೋಯ್ ಕ್ಯಾಸ್ಟಲಿನೋ ಮೆರವಣಿಗೆಯ ಬಗ್ಗೆ ಸ್ವಯಂಸೇವಕರ ಸೇವೆಯ ಬಗ್ಗೆ ರೂಪು ರೇಖೆ ನೀಡಿ ಪ್ರತಿ ಚರ್ಚಿನ ಸ್ವಯಂ ಸೇವಕರು ಅವರು ನಿಲ್ಲುವ ಸ್ಥಳವನ್ನು ತಿಳಿಸಿದರು.
ಈ ಪರಮ ಪ್ರಸಾದದ ಮೆರವಣಿಗೆಯು ಆ ದಿನ ಸಂಜೆ 3 ಗಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದ್ದು 4.30ಕ್ಕೆ ಮಿಲಾಗ್ರಿಸ್ ಚರ್ಚಿನಿಂದ ಪಾಂಡೇಶ್ವರದ ರೊಸಾರಿಯೊ ಚರ್ಚಿಗೆ ಮೆರವಣಿಗೆ ಮೂಲಕ ಪರಮ ಪ್ರಸಾದ ಕೊಂಡೊಯ್ಯಲಾಗುವುದು. ಚರ್ಚಿನ ತೆರೆದ ಮೈದಾನದಲ್ಲಿ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳು ಜರಗಲಿರುವುದು.
ಸಭೆಯಲ್ಲಿ ಧರ್ಮ ಪ್ರಾಂತ್ಯದ 124 ಚರ್ಚುಗಳಿಂದ ಬಂದ ಧರ್ಮಗುರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಿದ್ದರು.