10:19 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಕಿಮ್ಮನೆ ರತ್ನಾಕರ್ ಅಸ್ತಿತ್ವಕ್ಕಾಗಿ ಹೀಗೆ ಮಾತನಾಡುತ್ತಾರೆ: ತೀರ್ಥಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು

16/11/2024, 18:20

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಅರಗ ಜ್ಞಾನೇಂದ್ರ ಅವರು ಎಣ್ಣೆ ಅಂಗಡಿಗೆ ಶಾಸಕ ಸ್ಥಾನ ಅಡ ಇಡುವುದಾಗಿ ಅಲ್ಲ, ನಮ್ಮ ಕ್ಷೇತ್ರದ ಜನರಿಗೆ ತೊಂದರೆ ಆದಾಗ ಶಾಸಕ ಸ್ಥಾನ ಬೇಡ ಅಂದಿದ್ದರು.
ಕಿಮ್ಮನೆ ರತ್ನಾಕರ್ ಅವರು ಪಕ್ಷದಲ್ಲಿ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ಹೀಗೆ ಮಾತನಾಡುತ್ತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು ಹೇಳಿದರು.
ಶನಿವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಿಮ್ಮನೆ ರತ್ನಾಕರ್ ಅವರು ತಾವಿದ್ದ ಪಕ್ಷದಲ್ಲಿ ಎಲ್ಲರನ್ನು ತುಳಿದು ನಂತರ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಬಂದು ಅಲ್ಲಿದ್ದವರನ್ನು ತುಳಿದಿದ್ದೀರಾ, ನಂತರ ಮಂಜುನಾಥ್ ಗೌಡರ ಬಗ್ಗೆ ವಿಧಾನಸೌಧದಲ್ಲೇ ಭ್ರಷ್ಟ ಎಂದು ಮಾತನಾಡಿದವರು ಈಗ ಮೌನವಾಗಿರುವುದು ನೋಡಿದರೆ ಗೊತ್ತಾಗುತ್ತದೆ.
ಆರಗ ಜ್ಞಾನೇಂದ್ರ ಅವರು ಅಧಿಕಾರಕ್ಕಾಗಿ ಯಾವತ್ತೂ ಹೋರಾಟ ಮಾಡಿದವರಲ್ಲ, ಪಕ್ಷ ಅಧಿಕಾರ ಕೊಟ್ಟಿದ್ದು ಪ್ರಬುದ್ಧ ರಾಜಕಾರಣಿ ಎಂದು, ಅವರ ಬಗ್ಗೆ ಮಾತನಾಡುವ ಬದಲು ನೀವೇ ಆತ್ಮ ವಿಮರ್ಶನೆ ಮಾಡಿಕೊಳ್ಳುವುದು ಒಳ್ಳೆಯದು ಎಂದರು.
ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಅವರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದರು. ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ಯಾಕೆ ಕೊಡಲ್ಲ ಎಂದು ನಮ್ಮ ಕಾರ್ಯಕರ್ತರು ಸೇರಿ ಹಲವರು ಕೇಳಿದ್ದಾರೆ. ಅದಕ್ಕೆ ಆರಗ ಅವರೇ ಒಂದು ಬಾರಿ ಹೇಳಿದ್ದರು. ಅದೇನಂದರೆ ನನಗೆ ರಾಜಕೀಯ ಪ್ರಬುದ್ಧತೆ ಬಂದಿದೆ, ನಾನು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ, ನನಗೆ 20 ವರ್ಷ ಶಾಸಕ ಸ್ಥಾವನ್ನು ಜನರು ಕೊಟ್ಟಿದ್ದಾರೆ. ನನಗೆ ಮತ ನೀಡಿದ ಜನ ಮುಖ್ಯವೇ ಹೊರತು ಇಂತಹ ರಾಜಕಾರಣ ಅಲ್ಲ ಎಂದು ಹೇಳಿದ್ದರು ಎಂದರು.
ಜ್ಞಾನೇಂದ್ರ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಕಾರ್ಡ್ ಜನರಿಗೆ ಕೊಟ್ಟು ಮತ ಕೇಳಿದ್ದರು. ಅದಕ್ಕೆ ಜನರು ಸಹ ಹೌದು ಎಂದು ಗೆಲ್ಲಿಸಿದ್ದಾರೆ. ಕಿಮ್ಮನೆ ರತ್ನಾಕರ್ ಗೆ ಹೇಳುವುದು ಒಂದೇ, ನಿಮ್ಮ ಆತ್ಮ ಶಾಂತಿಗೆ ಹೀಗೆ ಮಾತನಾಡುವುದಾದರೆ ಮಾತನಾಡಿಕೊಳ್ಳಿ, ನೀವು ಹೀಗೆ ಮಾತನಾಡಿದರೆ ನಮಗೆ ರಾಜಕೀಯವಾಗಿ ಒಳ್ಳೆಯದು, ಆದರೆ ನೀವು ಕೂಡ ಮಂತ್ರಿಯದವರು, ನಮ್ಮ ಕ್ಷೇತ್ರಕ್ಕೆ ಇಂತಹ ಮಾತುಗಳು ಒಳ್ಳೆಯದಲ್ಲ ನಿಮ್ಮ ಘನತೆ ಗೌರವವನ್ನು ಹೆಚ್ಚಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್, ಸಂದೇಶ್ ಜವಳಿ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು