8:37 PM Thursday26 - December 2024
ಬ್ರೇಕಿಂಗ್ ನ್ಯೂಸ್
28ರಂದು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ‘ಮಂಗಳೂರು ಕಂಬಳ’: 6 ವಿಭಾಗಗಳಲ್ಲಿ ಸ್ಪರ್ಧೆ ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ 27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇಗುಲದಲ್ಲಿ ಈ ಬಾರಿ ಬಿಕಾಂ ಜಾತ್ರೆ!: ಹಾಗಂದ್ರೆ ಏನು… ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ… ಶಸ್ತ್ರ ಚಿಕಿತ್ಸೆಗೊಳಗಾಗಿರುವ ಕನ್ನಡದ ಪ್ರಸಿದ್ಧ ನಟ ಡಾ. ಶಿವರಾಜ್‌ ಕುಮಾರ್ ಚೇತರಿಕೆ; ಆರೋಗ್ಯ… ಸಿ.ಟಿ. ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ; ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ನಾಯಕ… ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ?: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಸಿ.ಟಿ.ರವಿ ವಿರುದ್ಧ ಕಾನೂನು ಸಮರ; ಪ್ರಧಾನಿ, ರಾಷ್ಟ್ರಪತಿಗೂ ದೂರು ನೀಡುವೆ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

ಶ್ರೀದೇವಿ ನೃತ್ಯಕೇಂದ್ರದಿಂದ ನೃತ್ಯೋತ್ಸವ-2024: ಕಥಕ್ ಪ್ರತಿಪಾದಕಿ ಡಾ. ವಿಧಿ ನಾಗರ್ ಗೆ ‘ಜಯಕಲಾ’ ಪ್ರಶಸ್ತಿ ಪ್ರದಾನ

09/11/2024, 22:11

ಮಂಗಳೂರು(reporterkarnataka.com): ಮಂಗಳೂರಿನ ಶ್ರೀದೇವಿ ನೃತ್ಯ ಕೇಂದ್ರದ ವತಿಯಂದ ನಾಟ್ಯ ಇತಿಹಾಸದ ಪಿತಾಮಹ ಎಂದೇ ಪ್ರಸಿದ್ದರಾದ ಪ್ರೊ. ಮೋಹನ್ ಖೋಕರ್‌ ಅವರ ಶತಮಾನೋತ್ಸವದ ಅಂಗವಾಗಿ ನೃತ್ಯೋತ್ಸವ-2024 ವಾರ್ಷಿಕ ನಾಟ್ಯ ಹಬ್ಬ ನಗರದ ಡಾನ್ ಬಾಸ್ಕೊ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.


ಬೆಳಗ್ಗೆ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ “ಪ್ರತಿಭಾ ಪ್ರದರ್ಶನ’ದ ಉದ್ಘಾಟನೆಯನ್ನು ಪ್ರೊ. ಆಶಿಷ್ ಖೋಕರ್ ನೆರವೇರಿಸಿದರು. ಪ್ರತಿಭಾ ಪ್ರದರ್ಶನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಬಂದಂತಹ 35 ಸ್ಪರ್ಧಾಳುಗಳಿಂದ ಆರಿಸಲ್ಪಟ್ಟ 15 ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರೊ. ಆಶಿಷ್ ಖೋಕರ್ ಹಾಗೂ ಕ್ಯಾಲಿಫೋರ್ನಿಯಾದ ಶಿವಂ ಸ್ಕೂಲ್ ಆಫ್ ಡಾನ್ಸ್‌ನ ನಿರ್ದೇಶಕಿ ನಯನಾ ಶೆಣೈ ತೀರ್ಪುಗಾರರಾಗಿದ್ದರು.
ಅದೇ ದಿನ ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗುರು “ಶಾಂತಲಾ” ಪ್ರಶಸ್ತಿ ವಿಜೇತೆ ದಿವಂಗತ ಜಯಲಕ್ಷ್ಮಿ ಆಳ್ವಾ ರವರ ಜನ್ಮ ದಿನದ ಸ್ಮರಣಾರ್ಥ “ಜಯ ಕಲಾ ಪ್ರಶಸ್ತಿ” ಎಂಬ ಶೀರ್ಷಿಕೆಯನ್ನು ನಾಟ್ಯ ಕ್ಷೇತ್ರದಲ್ಲಿನ ಉನ್ನತ ಸೇವೆಗಾಗಿ ವಾರಣಾಸಿಯ ಕಥಕ್ ಪ್ರತಿಪಾದಕಿಯಾದ ಡಾ. ವಿಧಿ ನಾಗರ್ ಇವರಿಗೆ ಶ್ರೇಷ್ಠ ಗುರು ‘ಶಾಂತಲಾ’ ಬಿರುದು ಪುರಸ್ಕತರಾದ ಉಲ್ಲಾಳ್ ಮೋಹನ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಭಾ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ಮೈತ್ರೇಯಿ ನಾವಡ ಅವರಿಗೆ “ಯುವಕಲಾ” ಪ್ರಶಸ್ತಿಯನ್ನು ನೀಡಲಾಯಿತು. ದ್ವಿತೀಯ ಸ್ಥಾನವನ್ನು ಮೈಸೂರಿನ ಸುಧನ್ವ ಹಾಗೂ ಮಂಗಳೂರಿನ ಸತ್ಯಶ್ರೀ ತೃತೀಯ ಸ್ಥಾನವನ್ನು ಪಡೆದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿಗಳಾಗಿದ್ದ ಬನಾರಸ್ ಹಿಂದು ಯುನಿವರ್ಸಿಟಿಯ ನಾಟ್ಯಶಾಸ್ತ್ರ ವಿಭಾಗದ ಮುಖ್ಯಾಸ್ಥರಾದ ಡಾ. ವಿಧಿ ನಾಗರ್ ಅವರು ಕಲೆಗಾಗಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಮುಂದಿನ ದಿನಗಳಲ್ಲೂ ಸೇವೆ ಸಲ್ಲಿಸುತ್ತೇನೆ ಎಂದರು.
ಪ್ರೊ. ಆಶಿಷ್ ಖೋಕರ್ ರವರು ಮಾತನಾಡಿ ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳಿದ್ದು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನಾಟ್ಯ ಜಗತ್ತಿಗೆ ಪ್ರೊ. ಮೋಹನ್ ಖೋಕರ್‌ರವರ ಕೊಡುಗೆಯನ್ನು ಬಿಂಬಿಸುವೆ ಕಿರುಚತ್ರವನ್ನು ಪ್ರೊ. ಆಶಿಷ್ ಖೋಕರ್ ರವರು ತೆರೆಯಮೇಲೆ ತೋರಿಸಿದರು. ಶ್ರೀ ಕೃಷ್ಣನೇ ಜಗತ್ರಕ್ಷಕನು ಎಂದು ತೋರಿಸಿಕೊಡುವ “ಕೃಷ್ಣ ಪ್ರಾಣ” ಎಂಬ ಭಕ್ತಿ ಪ್ರಧಾನ ಸಂಗೀತ-ನೃತ್ಯ ರೂಪಕವನ್ನು ಶ್ರೀದೇವಿ ನೃತ್ಯಕೇಂದ್ರ, ಮಂಗಳೂರು ಇದರ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಆಶಿಷ್ ಖೋಕರ್ ರವರು ಅತಿಥಿಗಳಾಗಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅದ್ಯಕ್ಷರಾಗಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕ್ಯಾಲಿಪೋರ್ನಿಯಾದ ಶಿವಂ ಸ್ಕೂಲ್ ಆಫ್ ಡಾನ್ಸ್‌ನ ನಿರ್ದೇಶಕಿ ನಯನಾ ಶೆಣೈ, ಶ್ರೀದೇವಿ ನೃತ್ಯಕೇಂದ್ರ ಮಂಗಳೂರು ಇದರ ನಿರ್ದೇಶಕಿಯಾದ ಡಾ. ಆರತಿ ಶೆಟ್ಟಿ, ಟ್ರಸ್ಟಿಗಳಾದ ಹರೀಶ್ ಶೆಟ್ಟಿ. ಮಿಲನ್ ರೈ, ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ರವಿಶಂಕರ್ ರಾವ್ ಸ್ವಾಗತಿಸಿದರು, ಡಾ. ಶಾಲಿನಿ ಅಯ್ಯಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು