ಇತ್ತೀಚಿನ ಸುದ್ದಿ
ಮೋದಿ, ಅಮಿತ್ ಶಾ ವಿರುದ್ಧ ಟೀಕೆ ಮಾಡಿದ್ದಕ್ಕೆ ಇಡಿಯಿಂದ ಪ್ರಕರಣ ಹಾಕಿಸಿದ್ರು: ಮುಖ್ಯಮಂತ್ರಿ ಸಿದ್ದರಾಮಯ್ಯ
07/11/2024, 18:22
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕೆ ಮಾಡಿದ್ದಕ್ಕೆ ಇಡಿಯಿಂದ ಪ್ರಕರಣ ಹಾಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಗಿಸಿದರೆ ಕಾಂಗ್ರೆಸ್ ಮುಗಿಸದಂಗೆ ಅಂತ ನನ್ನ ಮೇಲೆ ಪ್ರಕರಣ ಹಾಕಿಸಿದ್ದಾರೆ. ನಿಮ್ಮ ಆಶೀರ್ವಾದ ಇರೋವರೆಗೂ ನನಗೆ ಏನೂ ಆಗಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಸಂಡೂರಿನ ಚೋರನೂರು ಗ್ರಾಮದಲ್ಲಿ ಹಮ್ಮಿಕೊಂಡ ಪ್ರಚಾರದಲ್ಲಿ ಮಾತನಾಡಿದ ಅವರು, ಸಂಡೂರು ಉಪ ಚುನಾವಣೆ ಮಹತ್ವಪೂರ್ಣವಾದ ಚುನಾವಣೆ. ತುಕಾರಂ ಗೆದ್ದರೆ ಲಾಡ್ ಗೆದ್ದ ಹಾಗೆ, ನಾನು ಗೆದ್ದ ಹಾಗೆ. ದೇಶದಲ್ಲಿ ಆಹಾರದ ಕೊರತೆ ಇತ್ತು, ಆಹಾರ ಇಲ್ಲದೇ ಸಾಯ್ತಾ ಇದ್ರು, ಕಾಂಗ್ರೆಸ್ ಆಹಾರ ಸ್ವಾವಲಂಬನೆ ಸಾಧಿಸಿತು. ಆವಾಗಿಂದ ಆಹಾರ ಭದ್ರತೆ ಜಾರಿಗೆ ಬಂತು. ಬಿಜೆಪಿಯವರು ದೇಶಕ್ಕಾಗಿ, ಜನರಿಗಾಗಿ ಏನು ಮಾಡಿದ್ರು? ದೇವರಾಜು ಅರಸು ನಂತರ 5 ವರ್ಷ ಅಧಿಕಾರ ಮಾಡಿದ್ದು ಸಿದ್ದರಾಮಯ್ಯ ಮಾತ್ರ. ನಾವು ನೀಡಿದ್ದ ಎಲ್ಲ ಭರವಸೆ ಈಡೇರಿಸಿದ್ದೇವೆ. 136 ಸ್ಥಾನ ಕಾಂಗ್ರೆಸ್ ಗೆ ಜನರು ಕೊಟ್ಟು, ಪೂರ್ಣ ಬಹುಮತ ಸರಕಾರ ಕೊಟ್ರು, ನಾವು ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೀವಿ. ಕುಮಾರಸ್ವಾಮಿ ಭಾಷಣ ಮಾಡಿದ್ರು ಐದು ವರ್ಷ ಜನರ ಜತೆ ಕೆಲಸ ಮಾಡಿದವರು ಗೆಲ್ಲಲ್ಲ, ದುಡ್ಡು ಕೊಟ್ಟು ವೋಟು ತಂಗೊಂಡು ಗೆಲ್ತಿವಿ ಅಂತಾ ಹೇಳಿದ್ದ ಭಾಷಣ ತುಣುಕು ಇದೆ, ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ನಾವು ಅದನ್ನ ಪ್ಲೇ ಮಾಡ್ತಾ ಇದ್ದೀವಿ. ಸಾಲ ಮನ್ನಾ ಯಾರಾದರೂ ಮಾಡಿದ್ರಾ?, ಬಿಜೆಪಿ ಅವರು ಸಾಲ ಮನ್ನಾ ಮಾಡಿಲ್ಲ. ನಾವು ರೈತರ ಸಾಲ ಮನ್ನಾ ಮಾಡಿದ್ದೀವಿ, ಬಿಜೆಪಿ ಅವರು ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದರು. 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ನಾವು ಸಹಕಾರ ಸಂಘದಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡಿದ್ದೇವೆ. ವಿಧಾನಸೌಧದಲ್ಲಿ ಯಡಿಯೂರಪ್ಪ ಹೇಳಿದ್ರು, ಸಾಲ ಮನ್ನಾ ಮಾಡಕ್ಕಗಲ್ಲ, ನೋಟ ಪ್ರಿಂಟ್ ಮಾಡೋ ಮಷಿನ್ ಇಲ್ಲ ಅಂದ್ರು ಮಿ.ಯಡಿಯೂರಪ್ಪ, ಅಂತವರು ಮಣ್ಣಿನ ಮಗ, ರೈತರ ಮಗ ಅಂತಾರೆ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಅಚ್ಛೇ ದಿನ ಆಯೆಂಗಾ ಅಂದರು, ಕಪ್ಪು ಹಣ ತರ್ತಿವಿ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಹಣ ಹಾಕ್ತಿನಿ ಅಂದ್ರು ಹಾಕಿದ್ರಾ? ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ, ಕೊಟ್ಟ ಮಾತಿಗೆ ನಡೆದುಕೊಂಡ ಕಾಂಗ್ರೆಸ್ ಎರಡರ ನಡುವೆ ಚುನಾವಣೆ ನಡಿತಾ ಇದೆ ಯಾರಿಗೆ ವೋಟು ಹಾಕ್ತಿರಾ? ಬಣ್ಣದ ಮಾತು ಆಡುವ ಬಿಜೆಪಿ ಅವರಿಗೆ ವೋಟ್ ಹಾಕಬೇಡಿ, ನನ್ನ ಮೇಲೆ, ನಾಗೇಂದ್ರ ಮೇಲೂ ಸುಳ್ಳು ಕೇಸ್ ಹಾಕಿಸಿವೆ ಬಿಜೆಪಿ ಗಿರಾಕಿಗಳು. ನಿಮ್ಮ ಆಶೀರ್ವಾದ ಇರೋವರೆಗೂ ನನಗೆ ಏನೂ ಆಗಲ್ಲ. ನೀವೆಲ್ಲ ತಪ್ಪದೇ ಕಾಂಗ್ರೆಸ್ ಗುರುತಿಗೆ ವೋಟು ಹಾಕಿ ಅನ್ನಪೂರ್ಣ ಅವರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದರು.