7:14 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಪೆರಾಜೆ ಮಠದಲ್ಲಿ ಉಪ್ಪಿನಂಗಡಿ ವಲಯ ವಿದ್ಯಾರ್ಥಿ ಯುವ ಪ್ರತಿಭಾ ಪ್ರದರ್ಶನ, ಕ್ರೀಡೋತ್ಸವ

07/11/2024, 10:53

ಬಂಟ್ವಾಳ(reporterkarnataka.com): ಉಪ್ಪಿನಂಗಡಿ ವಲಯ ವಿದ್ಯಾರ್ಥಿ ಯುವ ಪ್ರತಿಭಾ ಪ್ರದರ್ಶನ ಮತ್ತು ಕ್ರೀಡೋತ್ಸವ ಪೆರಾಜೆ ಮಾಣಿ ಮಠದಲ್ಲಿ ಜರುಗಿತು.
ಉಪ್ಪಿನಂಗಡಿ ಹವ್ಯಕ ಮಂಡಲ ಗುರಿಕ್ಕಾರ ಶಂಕರ ಭಟ್ ಬಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಜಾತಿ ಮತಗಳ‌‌ ವೈಭವೀಕರಣವಾಗುತ್ತಿದ್ದು, ನಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗುವುದು ಅನಿವಾರ್ಯವಾಗಿದೆ. ಸಂಘಟನೆಗಾಗಿ ಕ್ರೀಡಾಕೂಟ‌‌ ಏರ್ಪಡಿಸಲಾಗಿದೆ‌ ಎಂದರು. ಬಾಲಸುಬ್ರಹ್ಮಣ್ಯ ಭಟ್ ಸರ್ಪಮೂಲೆ ಮಾತನಾಡಿ, ವೈದಿಕ, ಧಾರ್ಮಿಕ,‌ ಶಿಕ್ಷಕ ಹಾಗೂ ಮಾತೆಯರ ಸಮಾವೇಶಗಳು ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿ ಯುವಕರ ಒಗ್ಗೂಡಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದರು.


ಕೇಶವ ಪ್ರಕಾಶ‌ ಎಂ.ಶುಭಹಾರೈಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಬೆಳ್ತಂಗಡಿ ಶ್ರೀಭಾರತಿ ಉರ್ವಾಲು ಶಾಲೆಯ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಹಾರಕೆರೆ ನಾರಾಯಣ ಭಟ್, ಶೈಲಜಾ ಭಟ್ ಕೆ.ಟಿ. ಮತ್ತಿತರರು ಉಪಸ್ಥಿತರಿದ್ದರು.
ಮಹೇಶ ಸ್ವಾಗತಿಸಿದರು.ಅವನೀಶ ಪೆರಿಯಡ್ಕ ನಿರೂಪಿಸಿ ವಂದಿಸಿದರು. ಬಳಿಕ ಮಠದಲ್ಲಿ ಹಿರಿಯರಿಂದ ರುದ್ರ ಪಠಣ ನಡೆಯಿತು.ವಿದ್ಯಾರ್ಥಿಗಳ ಬೌದ್ಧಿಕ ಸ್ಪರ್ಧೆಗಳು,ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳು ಜರಗಿತು.

ಇತ್ತೀಚಿನ ಸುದ್ದಿ

ಜಾಹೀರಾತು