12:02 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಸೂರ್ಯನ ರಹಸ್ಯಗಳ ಅಧ್ಯಯನಕ್ಕೆ ಇಸ್ರೋದಿಂದ ಪ್ರೊಬಾ 3 ನೌಕೆ: ಡಿಸೆಂಬರ್ ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ

06/11/2024, 15:24

ಹೊಸದಿಲ್ಲಿ(reporterkarnataka.com): ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯನ ರಹಸ್ಯಗಳನ್ನು ಕಂಡು ಹಿಡಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯುರೋಪಿಯನ್ ಒಕ್ಕೂಟದ ಪ್ರೊಬಾ 3 ಸೂರ್ಯ ವೀಕ್ಷಣಾ ಬಾಹ್ಯಾಕಾಶ ನೌಕೆಯನ್ನು ಡಿಸೆಂಬರ್​ನಲ್ಲಿ ಉಡಾವಣೆ ಮಾಡಲಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ
ಡಾ. ಜಿತೇಂದ್ರ ಸಿಂಗ್ ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ.
ಸೂರ್ಯನ ರಹಸ್ಯ ಕಂಡು ಹಿಡಿಯಲು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಯುರೋಪಿನ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲಿದ್ದಾರೆ. ಸೂರ್ಯನ ಮಸುಕಾದ ಕರೋನಾ ಅಧ್ಯಯನ ನಡೆಯಲಿದೆ. ಸೌರ ಅಂಚಿಗೆ ಹತ್ತಿರವಿರುವ ಸೂರ್ಯನ ಮಸುಕಾದ ಕರೋನಾವನ್ನು ಅಧ್ಯಯನ ಮಾಡುವ ಸಾಮರ್ಥ್ಯ ವನ್ನು ಪ್ರೋಬಾ -3 ಹೊಂದಿದೆ. ಇದನ್ನು ಇಸ್ರೋ ನಿರ್ವಹಿಸುವ ಪಿಎಸ್ಎಲ್​ವಿ-ಎಕ್ಸ್ಎಲ್ ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸೂರ್ಯನ ಅಧ್ಯಯನ ನಡೆಸುವ ಯುರೋಪಿಯನ್ ಒಕ್ಕೂಟದ ದೊಡ್ಡ ಆರ್ಬಿಟರ್ ಪ್ರೊಬಾ 3 ಡಿಸೆಂಬರ್​ನಲ್ಲಿ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಇಸ್ರೋ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ವಿಜ್ಞಾನಿಗಳು ಜಂಟಿಯಾಗಿ ಸೂರ್ಯನ ವಾತಾವರಣದ ಅಧ್ಯಯನ ಮಾಡಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಪ್ರೋಬಾ -3 ಮಿಷನ್ 2 ಉಪಗ್ರಹಗಳನ್ನು ಒಳಗೊಂಡಿದೆ. ಇದು ಸೌರ ಕರೋನಾಗ್ರಾಫ್ ಎಂದು ಕರೆಯಲ್ಪಡುವ 144 ಮೀಟರ್ ಉದ್ದದ ಸಾಧನವಾಗಿ ಕೆಲಸ ಮಾಡುತ್ತದೆ. ಸೂರ್ಯನ ಪ್ರಖರ ಬೆಳಕಿನಿಂದಾಗಿ ವೀಕ್ಷಿಸಲು ಕಷ್ಟಕರವಾದ ಸೂರ್ಯನ ಕರೋನಾವನ್ನು ಅಧ್ಯಯನ ಮಾಡಲು ಇದು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ. ವಿಶ್ವದ ಮೊದಲ ಈ ನಿಖರ ಫ್ಲೈಯಿಂಗ್ ಮಿಷನ್ ವ್ಯವಸ್ಥೆಯು ವಿಜ್ಞಾನಿಗಳಿಗೆ ಸೂರ್ಯನ ಅಸ್ಪಷ್ಟ ಕರೋನಾವನ್ನು ಅಭೂತಪೂರ್ವ ಸಾಮೀಪ್ಯ ಮತ್ತು ಸಮಗ್ರವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ನುಡಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು