ಇತ್ತೀಚಿನ ಸುದ್ದಿ
ರವಿ ಶೆಟ್ಟಿ ಮೂಡಂಬೈಲು ಹಾಗೂ ಮಿತ್ರಂಪಾಡಿ ಜಯರಾಮ ರೈಯವರಿಗೆ ನವಕರ್ನಾಟಕ ರತ್ನ ಪ್ರಶಸ್ತಿ
03/11/2024, 11:47
ಬೆಂಗಳೂರು(reporterkarnataka.com): ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಹಾಗೂ ಅಬುಧಾಬಿಯ ಇಂಡಿಯಾ ಸೋಶಿಯಲ್ ಆಂಡ್ ಕಲ್ಚರ್ ಸೆಂಟರ್ ಅಧ್ಯಕ್ಷ ಜಯರಾಮ್ ರೈ ಮಿತ್ರಂಪಾಡಿಯವರು ಸಮಾಜಸೇವೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಪ್ರತಿಷ್ಠಿತ ನವಕರ್ನಾಟಕ ರತ್ನ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.
ಯುಎಇ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಸಮ್ಮೇಳನದ ಅಧ್ಯಕ್ಷರಾಗಿ ಆಗಮಿಸಿದ್ದರು.