ಇತ್ತೀಚಿನ ಸುದ್ದಿ
ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ದಂಪತಿಗೆ ಸ್ಪಂದನ ಸಿರಿ ಕನ್ನಡ ನುಡಿ ವಿಭೂಷಣ -ರಾಷ್ಟ್ರೀಯ ಪ್ರಶಸ್ತಿ ಪ್ರದಾನ
30/10/2024, 20:57
ಕಾಸರಗೋಡು(reporterkarnataka.com):ಕಾಸರಗೋಡು ಕನ್ನಡ ಭವನ ಸಭಾ ಭವನದಲ್ಲಿ ನಡೆದ “ಕೇರಳ -ಕರ್ನಾಟಕ ಸ್ಪಂದನ ಸಿರಿ ಶಿಕ್ಷಣ, ಕೃಷಿ, ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ, ಕನ್ನಡ ಭವನ ರೂವಾರಿಗಳಾದ ವಾಮನ್ ರಾವ್ ಬೇಕಲ್ -ಸಂದ್ಯಾರಾಣಿ ದಂಪತಿಗಳಿಗೆ, ಸ್ಪಂದನ ಸಿರಿ ಕನ್ನಡ ನುಡಿ ವಿಭೂಷಣ -ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ ಮಾನಸ ಮೈಸೂರು ಪ್ರಶಸ್ತಿ ಪ್ರದಾನ ಮಾಡಿದರು. ಸ್ಪಂದನ ಸಿರಿ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನ್ ಪ್ರಶಸ್ತಿ ಫಲಕ ನೀಡಿದರು. ಕೇರಳ ರಾಜ್ಯ ಕ. ಸಾ. ಪ. ಅಧ್ಯಕ್ಷರಾಧ ಡಾ ಜಯಪ್ರಕಾಶ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ,ಸಮ್ಮೇಳನ ಅಧ್ಯಕ್ಷರಾಧ ಸಾಹಿತಿ ವಿ. ಬಿ. ಕುಳಮರ್ವ, ಪ್ರೊ. ಎ ಶ್ರೀನಾಥ್ ಮುಂತಾದವರು ವೇದಿಕೆಯಲ್ಲಿದ್ದರು.