ಇತ್ತೀಚಿನ ಸುದ್ದಿ
ಶಿವಳ್ಳಿ ಸ್ಪಂದನದ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು
27/10/2024, 22:35
ಮಂಗಳೂರು(reporterkarnataka.com): ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ ಹೆಸರಲ್ಲಿ ನಕಲಿ ಲೆಟರ್ ಹೆಡ್ ಹಾಗೂ ಸೀಲ್ ಬಳಸಿ ವಂಚನೆ ಮಾಡಿದ ಪ್ರಕರಣ ಕುರಿತು ಕೇಸ್ ದಾಖಲಿಸಲಾಗಿದೆ.
ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾಸ್ಕರ ಭಟ್ ಬಿ. ಮಂಗಳಾದೇವಿ ಎಂಬವರು ತಾವೇ ಕಾರ್ಯದರ್ಶಿ ಎಂದು ಹೇಳಿಕೊಂಡು ಸಂಘದ ನಕಲಿ ಕಾಗದ ಪತ್ರ ತಯಾರಿಸಿ ಲೆಟರ್ ಹೆಡ್ ಮತ್ತು ಸೀಲ್ ಬಳಸಿ ಮೋಸ ವಂಚನೆ ಮಾಡಿದ್ದಾರೆ ಎಂದು ಶಿವಳ್ಳಿ ಸ್ಪಂದನ ಕಾರ್ಯದರ್ಶಿ ಕದ್ರಿಯ ಕೆ. ಕೃಷ್ಣ ಭಟ್ ದೂರು ನೀಡಿದ್ದರು.
ಡಿಆರ್ ರಿಜಿಸ್ಡ್ರಾರ್ ಕಚೇರಿಗೆ ಸಂಘದ ನವೀಕರಣ ಮಾಡಲು ಹೋದಾಗ ಅಲ್ಲಿ ಭಾಸ್ಕರ ಭಟ್ ಬೇರೆಯೇ ಪದಾಧಿಕಾರಿಗಳ ಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದರು.
ಅಲ್ಲಿಂದ ಸ್ವೀಕೃತಿ ಪತ್ರ ಬರೆದು ಇತರ ನಕಲಿ ಕಾಗದ ಪತ್ರಗಳನ್ನು ಕರ್ನಾಟಕ ಬ್ಯಾಂಕಿಗೆ ನೀಡಿ ಅಲ್ಲಿಯೂ ಅವರ ಹೆಸರಿನ ಜತೆ ಉದಯಶಂಕರ ಭಟ್, ಗಿರೀಶ್ ಎಂಬವರ ಹೆಸರನ್ನು ಬ್ಯಾಂಕ್ ಖಾತೆಯಲ್ಲಿ ನೋಂದಣಿ ಮಾಡಿದ್ದರು. ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲು ಈ ಕೃತ್ಯ ನಡೆಸಿದ್ದರು ಎಂದು ಕಾರ್ಯದರ್ಶಿ ಕೃಷ್ಣ ಭಟ್ ದೂರಿನಲ್ಲಿ ತಿಳಿಸಿದ್ದಾರೆ.