7:56 PM Thursday17 - October 2024
ಬ್ರೇಕಿಂಗ್ ನ್ಯೂಸ್
ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ… ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ: ಹಳಿ ತಪ್ಪಿದ… ತೀರ್ಥಹಳ್ಳಿಯಲ್ಲಿ ಸಂಭ್ರಮ- ಸಡಗರದ ಆಯುಧ ಪೂಜೆ: ಪೊಲೀಸ್ ಠಾಣೆಯಲ್ಲೂ ಬಂದೂಕು, ರಿವಾಲ್ವರ್ ಗಳಿಗೆ… ಸಾಲ ವಾಪಸ್ ಕೇಳಿದಕ್ಕೆ ಕಾರ್ಪೆಂಟರ್ ಅಮಾನುಷ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ… ಮಂಗಳೂರು: ಸರ್ಫಾಸಿ ಕಾಯಿದೆ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಕಾಫಿ ಬೆಳೆಗಾರರ ಪ್ರತಿಭಟನೆ ತೀರ್ಥಹಳ್ಳಿ: ಸಾಲಬಾಧೆಯಿಂದ ಮನನೊಂದು ರೈತ ಅತ್ಮಹತ್ಯೆ

ಇತ್ತೀಚಿನ ಸುದ್ದಿ

ರೈಲ್ವೆ ಮೇಲ್ಸೇತುವೆಗೆ ಮಾಜಿ ಸಂಸದ ದಿವಂಗತ ಶ್ರೀನಿವಾಸ್ ಪ್ರಸಾದ್ ಹೆಸರಿಡುವಂತೆ ಬಿಜೆಪಿ ಒತ್ತಾಯ

16/10/2024, 21:42

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡಿನಲ್ಲಿ ನಿರ್ಮಾಣಗೊಂಡಿರುವ ನೂತನ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆಗೆ ಹಿರಿಯ ಮುತ್ಸದ್ದಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದರಾಗಿದ್ದ ದಿವಂಗತ ವಿ ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಬಿಜೆಪಿ ಮುಖಂಡ ಹಾಗೂ ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ .
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಗಳ ಪ್ರಭಾವಿ ನಾಯಕರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರಾಗಿ, ಸಂಸದರಾಗಿ, ಶಾಸಕರಾಗಿ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಅವರ ನೆನಪಿಗಾಗಿ ಅವರ ಅವಧಿಯಲ್ಲಿ ನಡೆದ ಈ ರೈಲ್ವೆ ಮೇಲ್ಸೇತುವೆಗೆ ಅವರ ಹೆಸರಿಡಬೇಕೆಂದು ಒತ್ತಾಯಿಸಿದರು.
ಎರಡು ಜಿಲ್ಲೆಗಳಲ್ಲಿ ಪ್ರಮುಖವಾಗಿ ಎಲ್ಲೂ ಯಾವುದೇ ರಸ್ತೆಗಳಿಗಾಗಲಿ, ಸೇತುವೆಗಳಿಗಾಗಲಿ, ವೃತ್ತಗಳಿಗಾಗಲಿ ಅವರ ಹೆಸರಿಟ್ಟಿರುವುದಿಲ್ಲ. ಆ ಕಾರಣಕ್ಕಾಗಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ ಈ ಸೇತುವೆಗೆ ಅವರ ಹೆಸರು ಸೂಕ್ತ ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ತಿಳಿಸಿದರು.
ಈ ಸಂದರ್ಭ ಮುಂದುವರೆದು ಮಾತನಾಡಿದ ಅವರು, ನಿನ್ನೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ನಗರ ಸಭೆಯ ಅಧಿಕಾರಿಗಳು ನಡೆಸಿರುವ ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಖುದ್ದು ಶಾಸಕರೇ ಹೇಳಿದ್ದಾರೆ. ಹಾಗಾಗಿ ನಾವು ಅವರಿಗೆ ಅಭಿನಂದಿಸುತ್ತೇವೆ. ಆದರೆ ಅಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಯೋ ಇಲ್ಲ ವರ್ಗಾವಣೆ ಮಾಡಿಯೂ ತನಿಖೆ ನಡೆಸಿದರೆ ಸೂಕ್ತ ಇಲ್ಲವಾದಲ್ಲಿ ಅವರೇ ಇದ್ದರೆ ಸಾಕ್ಷ್ಯ ನಾಶಪಡಿಸಿ ತನಿಖೆಗೆ ಅಡಚಣೆ ಉಂಟು ಮಾಡುತ್ತಾರೆ. ಅದಕ್ಕಾಗಿ ಶಾಸಕರು ಅಂಥವರ ವಿರುದ್ಧ ಕ್ರಮ ಕೈಗೊಂಡು ನಂತರ ತನಿಖೆ ನಡೆಸಲಿ ಎಂದು ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು, ನಗರಸಭಾ ಸದಸ್ಯರುಗಳಾದ ಮಹದೇವಪ್ರಸಾದ್,ದೇವ, ಕಪಿಲೇಶ್,ಶಂಕರಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು