ಇತ್ತೀಚಿನ ಸುದ್ದಿ
ಪ್ರೊಫೆಸರ್ ಜೆ. ಎನ್. ಶೆಟ್ಟಿ ಸ್ಮಾರಕ ಭಾಷಣ: 125 ಚರ್ಮರೋಗ ತಜ್ಞರು, ಪಿಜಿ ವಿದ್ಯಾರ್ಥಿಗಳು ಭಾಗಿ
14/10/2024, 22:07
ಮಂಗಳೂರು(reporterkarnataka.com):ಪ್ರೊಫೆಸರ್ ಜೆ. ಎನ್. ಶೆಟ್ಟಿ ಸ್ಮಾರಕ ಭಾಷಣ ಸಭೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಭಾಭವನದಲ್ಲಿ ನಡೆಸಿತು.
ಈ ವೈಜ್ಣಾನಿಕ ಕಾರ್ಯಕ್ರಮದಲ್ಲಿ ಒಟ್ಟು 125 ಚರ್ಮರೋಗ ತಜ್ಞರು ಹಾಗೂ ಚರ್ಮರೋಗ ವಿಭಾಗದ ಸ್ನಾತಕೋತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಾ ಡೀನ್ ಡಾ. ಆಂಟನಿ ಸಿಲ್ವನ್ ಡಿಸೋಜರವರು ವಹಿಸಿದ್ದರು.













ಮುಖ್ಯ ಅತಿಥಿಯಾಗಿ ಡಾ ದೀಪಿಕಾ ಪಾಂದಿ, ಪ್ರಾದ್ಯಾಪಕರು, ಡೆಲ್ಲಿ ವಿಶ್ವವಿದ್ಯಾನಿಲಯ (Professor of Dermatology), ಡಾ ಸುಕುಮಾರ್ ದಂಡೆಕೇರಿ, ಅಧ್ಯಕ್ಷರು ಜೆ. ಎನ್. ಶೆಟ್ಟಿ ಸ್ಮಾರಕ ಟ್ರಸ್ಟ್, ಡಾ. ಜೆಸಿಂತಾ ಮಾರ್ಟೀಸ್ ಚರ್ಮರೋಗ ವಿಭಾಗ ಮುಖ್ಯಸ್ಥರು, ಡಾ. ಗಣೇಶ್ ಎಸ್ ಪೈ, ಡಾ. ಮಂಜುನಾಥ್ ಶೆಣೈ, ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಡಾ ದೀಪಿಕಾ ಪಾಂದಿ ಪ್ರೊಫೆಸರ್ ಜೆ. ಎನ್. ಶೆಟ್ಟಿ ಸ್ಮಾರಕ ಭಾಷಣ ನೀಡಿದರು.














