2:06 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು

14/10/2024, 20:40

ಮಂಗಳೂರು(reporterkarnataka.com):
ಹೈ ಕೋರ್ಟ್  ಪೀಠ ಹೋರಾಟ ಸಮಿತಿಯ ಸಭೆ ನಗರದ ಎಸ್ ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹೈಕೋರ್ಟ್  ಪೀಠ ರಚನೆ
ಹೋರಾಟದ ಕಾನೂನು  ಮತ್ತು ಕೈಗೊಳ್ಳಬೇಕಾದ ಕ್ರಮ ಗಳ ಬಗ್ಗೆ ನ್ಯಾಯವಾದಿಗಳಾದ ಎಂ. ಪಿ. ನರೋನ್ನಾ ಅವರು ವಿವರಿಸಿದರು.
*ಸಭೆಯ ಮುಖ್ಯ ಅಂಶಗಳು:
*ಎಲ್ಲಾ ಸಾರ್ವಜನಿಕ ವಲಯದ ಜನತೆಯ ಪ್ರತಿನಿಧಿ ಗಳನ್ನು ಒಳಗೊಂಡ ನಿಯೋಗ ರಾಜ್ಯದ ಮುಖ್ಯಮಂತ್ರಿ, ಕಾನೂನು ಸಚಿವರನ್ನು ಭೇಟಿ ಯಾಗಿ ಮನವಿ ಸಲ್ಲಿಸಿ  ಪೀಠ ಸ್ಥಾಪನೆಗೆ ಒತ್ತಾಯಿಸುವುದು.

*ಸಾಧ್ಯವಾದರೆ ಮಂಗಳೂರು ನಗರದ ಒಳಗೆ ಅಥವಾ ಮಂಗಳೂರು ಉಡುಪಿ ಮದ್ಯದಲ್ಲಿ ಜಾಗ ನಿಗದಿ ಪಡಿಸಲು ಪ್ರಯತ್ನ ಮಾಡುವುದು.
ಮಂಗಳೂರನಲ್ಲಿ ಸರ್ಕಿಟ್ ಹೌಸ್ ಹತ್ತರದಲ್ಲಿ  ಇರುವ   ಸುಮಾರು 8 ಜಾಗವನ್ನು ಹೈ ಕೋರ್ಟ್ ಪೀಠಕ್ಕೆ ಮೀಸಲು ಇಡಲು ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡುವುದು.
*ಹೋರಾಟದ ಭಾಗವಾಗಿ ಜನಭಿಪ್ರಾಯ ಮೂಡಿಸಲು ಮುಲ್ಕಿಯಿಂದ ಮಂಗಳೂರಿಗೆ  ಪಾದಯಾತ್ರೆ ನಡೆಸುವುದು.
*ಪೀಠ ಸ್ಥಾಪನೆಗೆ ಅಗ್ರಹಿಸಿ ಮಂಗಳೂರು ಬಂದ್ ಗೆ  ಕರೆ ನೀಡುವುದು.
*ಮುಂಬರುವ ರಾಜ್ಯ ಬಜೆಟ್ ನಲ್ಲಿ  ಹೈಕೋರ್ಟ್ ಪೀಠ ಸ್ಥಾಪನೆಗೆ 25 ಕೋಟಿ ಅನುದಾನ ಒದಗಿಸುವಂತೆ  ಸರ್ಕಾರವನ್ನು ಅಗ್ರಹಿಸುವುದು.
*ರಾಜಕೀಯ, ಸಾಮಾಜಿಕ, ಧಾರ್ಮಿಕ, ಮತ್ತು ಇತರ ಎಲ್ಲಾ ವಲಯ ದ ಪ್ರಭಾವಿ ವ್ಯಕ್ತಿಗಳ ಬೆಂಬಲ ಒಡೆದು ಕೊಳ್ಳುವುದು.
*ಆರು ಜಿಲ್ಲೆಯ ಪ್ರಮುಖರನ್ನು ಮುಖತಃ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೇಳುವುದು.
*ಆರು ಜಿಲ್ಲೆಯ ಪ್ರಮುಖ, ಪ್ರಭಾವಿ ವ್ಯಕಿಗಳನ್ನು ಒಳಗೊಂಡ ಶಾಶ್ವತ ಹೈಕೋರ್ಟ್ ಹೋರಾಟ ಸಮಿತಿ ರಚಿಸುವುದು.
*ಆರು ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳನ್ನು ಸಭೆ ನಡೆಸಿ ಹೋರಾಟದಲ್ಲಿ ಭಾಗವಹಿಸುವಂತೆ ಸಭೆಗಳನ್ನು ಮಾಡುವುದು.
*ಹೈಕೋರ್ಟ್ ಸಂಚಾರಿ ಪೀಠ ಕ್ಕೆ ಒತಾಯ ಮಾಡುವುದು
*ಕಲಬರ್ಗಿ ಮತ್ತು ಧಾರಾವಾಡ ಪೀಠಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿ.
*ವೀರಪ್ಪ ಮೊಯ್ಲಿ ಸೇರಿ ಅನೇಕ ಪ್ರಭಾವಿ ವ್ಯಕಿಗಳನ್ನು ಭೇಟಿ ಮಾಡಿ ಬೆಂಬಲ ಕೇಳುವುದು.

*ಈ ಕುರಿತು ರಾಜ್ಯ ಪ್ರವಾಸಕ್ಕೆ ತಂಡ ರಚನೆ.
*ಕಾನೂನು ಹೋರಾಟಕ್ಕೆ, ಸಾರ್ವಜನಿಕರ ಭೇಟಿ, ವಕೀಲರು ಸಂಘದ ಭೇಟಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಹೀಗೆ ಅಗತ್ಯಕ್ಕೆ ತಕ್ಕುದಾಗಿ ಸಮಿತಿ ರಚನೆ ಮಾಡುವುದು
*ಪ್ರತಿ ತಾಲ್ಲೂಕಿನಲ್ಲಿ ಹಕ್ಕೋತ್ತಾಯ ಸಭೆ /ಕಾರ್ಯಕ್ರಮ ಆಯೋಜನೆ ಮಾಡುವುದು
*ಹೋರಾಟದ ಪರವಾಗಿ ಇರುವ ಎಲ್ಲ ಉಚ್ಚ ನ್ಯಾಯಾಲಯಗಳ ಅದೇಶ ಗಳಿಗೆ ಅನುಗುಣವಾಗಿ ಹೋರಾಟದ ರೂಪುರೆಷೆ ರಚನೆ.
*ಬೆಂಬಲ ಕೋರಿ ಸಹಿ ಸಂಗ್ರಹ ಅಭಿಯಾನ ನಡೆಸುವುದು
*ವಿವಿಧ ಸಂಘಟನೆ ಗಳನ್ನು ಹೋರಾಟದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು
*ದ. ಕ ಜಿಲ್ಲೆಯ ಎಲ್ಲಾ ವಕೀಲರು ಸಂಘ ದ ಅಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಉಪಾಧ್ಯಕ್ಷರು, ಖಜಾಂಜಿ ಸೇರಿ ಕೋರ್ ಕಮಿಟಿ ರಚಿಸಲಾಯಿತು ಮತ್ತು ಈ ಕಮಿಟಿಯ whatapp group ಮಾಡುವುದು.
ಸಭೆಯಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕರು ಐವನ್ ಡಿ ಸೋಜಾ,  ಹೈಕೋರ್ಟ್ ಪೀಠ  ಸಮಿತಿ ಅಧ್ಯಕ್ಷರು ಮತ್ತು ಮಂಗಳೂರು ವಕೀಲರ  ಸಂಘ ದ ಅಧ್ಯಕ್ಷರು ಹೆ. ವಿ. ರಾಘವೇಂದ್ರ, ಎಸ್ ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಮಹೇಶ್ಚಂದ್ರ, ಹಿರಿಯ ವಕೀಲರಾದ ಟಿ. ಎನ್. ಪೂಜಾರಿ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ಆರ್. ಬಲ್ಲಾಳ್, ಪ್ರಥ್ವಿರಾಜ್ ರೈ, ಮಾಜಿ ಕಾರ್ಯದರ್ಶಿ ಶ್ರೀಧರ್ ಯೆನ್ಮಾಕಜೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು